ಬೆಂಗಳೂರು,ಆಗಸ್ಟ್,3,2026 (www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದ್ದು ಈ ಮಧ್ಯೆ ಇದೀಗ ಮತ್ತೆ ನೂತನ ಸಚಿವರ ಪಟ್ಟಿ ಪರಿಷ್ಕರಣೆ ಆಗಿದೆ.
ಮಂಕಾಳ ವೈದ್ಯರನ್ನ ಕೈಬಿಟ್ಟು ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರನ್ನ ಸೇರಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಇದೀಗ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನ ಕೈಬಿಟ್ಟು ಮತ್ತೆ ಮಂಕಾಳ ವೈದ್ಯರಿಗೆ ಮಣೆ ಹಾಕಿದೆ. 
ಹೌದು ಇದೀಗ ನೂತನ ಸಚಿವರ ಪಟ್ಟಿ ಪರಿಷ್ಕರಣೆಯಲ್ಲಿ ಪಟ್ಟಿಗೆ ಎನ್.ಎಸ್.ಭೋಸರಾಜು ಮತ್ತು ಮಂಕಾಳ ವೈದ್ಯ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಇನ್ನು ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಗಾಯತ್ರಿ ಶಾಂತೇಗೌಡ ಅವರನ್ನ ಪಟ್ಟಿಯಿಂದ ಹೊರಗೆ ಹಾಕಲಾಗಿದ್ದು ಇಬ್ಬರಿಗೂ ಸಚಿವ ಸ್ಥಾನ ಕೈತಪ್ಪಿದಂತಾಗಿದೆ.
Key words: New minister list, revised, again







