Friday, September 18, 2026

BDA Apartments

JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ BDA JK_Adv BDA Adv
Home Front Page JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ

JK EXCCLUSIVE: 10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ

Dr. Yathindra Siddaramaiah has directed the Urban Development Department to take necessary steps and issue appropriate government orders to facilitate the execution of sale deeds for eligible allottees.

 

ಬೆಂಗಳೂರು/ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ 2005ರ ನಂತರ ರಚಿಸಲಾದ ವಸಂತನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಶಾಂತವೇರಿ ಗೋಪಾಲಗೌಡ ನಗರ ಹಾಗೂ ಲಲಿತಾದ್ರಿನಗರ ಬಡಾವಣೆಗಳಲ್ಲಿ ಹಂಚಿಕೆ ಮಾಡಲಾದ ನಿವೇಶನಗಳ 10 ವರ್ಷಗಳ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ.

ಆದರೆ ವಿವಿಧ ಕಾರಣಗಳಿಂದ ಅನೇಕ ಮಂಜೂರಾತಿದಾರರು ಮನೆ ನಿರ್ಮಿಸದೆ ಉಳಿದಿದ್ದು, ಇದೀಗ ವಯೋಮಾನ ಹಾಗೂ ಆರ್ಥಿಕ ಅಸಮರ್ಥತೆಯಿಂದ ಮನೆ ನಿರ್ಮಾಣ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಯಥಾಸ್ಥಿತಿಯಲ್ಲೇ ಕ್ರಯಪತ್ರ ನೀಡುವಂತೆ ಅವರು ಮನವಿಗಳನ್ನು ಸಲ್ಲಿಸುತ್ತಿದ್ದಾರೆ.

JK EXCCLUSIVE jk02

ಈ ಹಿನ್ನೆಲೆಯಲ್ಲಿ, ಮೇಲ್ಕಂಡ ಬಡಾವಣೆಗಳ ಹಂಚಿಕೆದಾರರಿಂದ ದಂಡ ಶುಲ್ಕವನ್ನು ವಸೂಲಿ ಮಾಡಿಕೊಂಡು ಕ್ರಯಪತ್ರ ನೀಡಿದಲ್ಲಿ, ಪ್ರಾಧಿಕಾರದ ವಿವಿಧ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಅವಕಾಶವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

10 ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ನಿವೇಶನಗಳಿಗೆ ಕ್ರಯಪತ್ರ mysore urben mda

ಆದ್ದರಿಂದ, ಈ ನಿವೇಶನಗಳ ಮಂಜೂರಾತಿದಾರರು ಹಾಗೂ ಕ್ರಯದಾರರಿಗೆ ಕ್ರಯಪತ್ರ ನೀಡುವ ಸಂಬಂಧ ಸೂಕ್ತ ಸರ್ಕಾರಿ ಆದೇಶ ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

Key words: MUDA, Plot Allottees, Seek Sale Deeds, After 10-Year Lease Period

SUMMARAY:

MUDA Plot Allottees Seek Sale Deeds After 10-Year Lease Period

Mysuru: Plot allottees in MUDA layouts such as Vasanthanagar, Lal Bahadur Shastri Nagar, Shantaveri Gopalagowda Nagar and Lalithadrinagar, formed after 2005, have requested issuance of sale deeds as the 10-year lease period has expired.

sale deeds YATHINDRA YATHINDRA 2

Many allottees have not constructed houses due to financial constraints and advancing age. It has been suggested that MUDA collect the prescribed penalty fee and execute sale deeds, which would also help generate revenue for the authority’s development projects.

Dr. Yathindra Siddaramaiah has directed the Urban Development Department to take necessary steps and issue appropriate government orders to facilitate the execution of sale deeds for eligible allottees.

10-year lease period jk02