ಬೆಂಗಳೂರು,ಸೆಪ್ಟಂಬರ್,24,2026 (www.justkannada.in) ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಂದ್ ಮಾಡಿ ಅದೇ ಹಣವನ್ನ ನೀರಾವರಿಗೆ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಆಗ್ರಹಿಸಿದ್ದಾರೆ.
ನಿನ್ನೆ ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಈ ವಿಚಾರವನ್ನ ಪ್ರಸ್ತಾಪಿಸಿ ಚರ್ಚಿಸಿದ್ದಾರೆ.
ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ಹಣ ನೀಡಲಾಗುತ್ತಿದೆ. ಆದರೆ ಸರ್ಕಾರ ನೀಡುತ್ತಿರುವ ಅರ್ಧ ಹಣ ವ್ಯರ್ಥವಾಗುತ್ತಿದೆ. ಮೃತಪಟ್ಟವರಿಗೂ ಹಣ ಹೋಗುತ್ತಿದೆ ಹೀಗಾಗಿ ಗೃಹಲಕ್ಷ್ಮೀಯರಿಗೆ ಕೊಡುವ 2 ಸಾವಿರ ರೂ. ಹಣ ಬಂದ್ ಮಾಡಿ. ಆ ಹಣವನ್ನ ನೀರಾವರಿ ಯೋಜನೆಗೆ ನೀಡಿ ಎಂದು ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಒತ್ತಾಯಿಸಿದ್ದಾರೆ.







