Monday, November 9, 2026

Dasara Wishes

Happy Dasara
Home Front Page ಕ್ಯು.ಎಸ್.ವರ್ಲ್ಡ್ ಯುನಿವರ್ಸಿಟಿ RANKING: ಮೈಸೂರು ವಿವಿಗೆ 247ನೇ ಸ್ಥಾನ- ಕುಲಪತಿ ಲೋಕನಾಥ್ ಸಂತಸ

ಕ್ಯು.ಎಸ್.ವರ್ಲ್ಡ್ ಯುನಿವರ್ಸಿಟಿ RANKING: ಮೈಸೂರು ವಿವಿಗೆ 247ನೇ ಸ್ಥಾನ- ಕುಲಪತಿ ಲೋಕನಾಥ್ ಸಂತಸ

ಕ್ಯು.ಎಸ್.ವರ್ಲ್ಡ್ ಯುನಿವರ್ಸಿಟಿ RANKING: ಮೈಸೂರು ವಿವಿಗೆ 247ನೇ ಸ್ಥಾನ- ಕುಲಪತಿ ಲೋಕನಾಥ್ ಸಂತಸ

ಮೈಸೂರು,ನವೆಂಬರ್,9,2026 (www.justkannada.in): ಇತ್ತೀಚೆಗೆ ಪ್ರಕಟವಾದ ಕ್ಯು.ಎಸ್. (Quacquarelli Symonds) ವರ್ಲ್ಡ್ ಯುನಿವರ್ಸಿಟಿ ರಾಂಕಿಂಗ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ದಕ್ಷಿಣ ಏಷ್ಯಾ ದೇಶಗಳ ನಡುವೆ 247ನೇ ಸ್ಥಾನವನ್ನು ಹಾಗೂ ಕರ್ನಾಟಕದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪೈಕಿ 1ನೇ ಸ್ಥಾನವನ್ನು ಪಡೆದಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಎನ್.ಕೆ ಲೋಕನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕುಲಪತಿ ಲೋಕನಾಥ್ ಅವರು, ಹನ್ನೊಂದು ಅಂಶಗಳನ್ನಾಧರಿಸಿ ಕ್ಯು.ಎಸ್. ಸಂಸ್ಥೆಯು ಪ್ರತಿ ವರ್ಷವೂ ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡುತ್ತದೆ. ಅವುಗಳಲ್ಲಿ ಪ್ರಮುಖವೆಂದರೆ: ಶೈಕ್ಷಣಿಕ ವರ್ಚಸ್ಸು, ವಿದ್ಯಾರ್ಥಿ-ಅಧ್ಯಾಪಕರ ಅನುಪಾತ, ಅಂತಾರಾಷ್ಟ್ರೀಯ ಒಡಂಬಡಿಕೆಗಳು, ಉದ್ಯೋಗದಾತರು ಹೊಂದಿರುವ ಅಭಿಪ್ರಾಯ, ಹಾಗೂ ಸಂಶೋಧನಾ ಪ್ರಕಟಣೆಗಳು. ಮೈಸೂರು ವಿಶ್ವವಿದ್ಯಾನಿಲಯವು ಬೋಧನೆ, ಸಂಶೋಧನೆ ಹಾಗೂ ಉದ್ಯೋಗ ಸೃಷ್ಟಿಯ ಆಯಾಮಗಳಲ್ಲಿ ಉತ್ತಮ ಸಾಧನೆ ಮಾಡಿ ಈ ಸ್ಥಾನವನ್ನು ಪಡೆದಿದೆ ಎಂದು ತಿಳಿಸಿದ್ದಾರೆ.ಕ್ಯು.ಎಸ್.ವರ್ಲ್ಡ್ ಯುನಿವರ್ಸಿಟಿ RANKING: ಮೈಸೂರು ವಿವಿಗೆ 247ನೇ ಸ್ಥಾನ- ಕುಲಪತಿ ಲೋಕನಾಥ್ ಸಂತಸ

ಖಾಯಂ ಅಧ್ಯಾಪಕರುಗಳ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯವು 247ನೇ ಸ್ಥಾನ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ. ಕ್ಯು.ಎಸ್. ಸಂಸ್ಥೆಯ ಮಾರ್ಗಸೂಚಿಯನ್ವಯ ಇಡೀ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ನಿಖರವಾಗಿ ಹಾಗೂ ಸಮರ್ಪಕವಾಗಿ ಬಿಂಬಿಸಿದ ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ವಿಶೇಷವಾಗಿ ಶ್ಲಾಘಿಸುತ್ತೇನೆ. ಮುಂದುವರಿದು, ವಿಶ್ವವಿದ್ಯಾನಿಲಯದ ಈ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದಿದ್ದಾರೆ.QS World University Rankings jk02_new jk02 new

 

English Summary
Title

University of Mysore Secures 247th Rank in QS Asia Rankings

Short Description
The University of Mysore (UoM) has secured the 247th position in the prestigious QS World University Rankings for Southern Asia. Expressing pride in this global academic achievement, Vice-Chancellor Prof. N.K. Lokanath attributed the success to the dedicated efforts of the university's Internal Quality Assurance Cell (IQAC), faculty, researchers, and students. As one of India's oldest and most respected higher education institutions, UoM continues to excel across core evaluation metrics, including academic reputation, research output, and teaching excellence. This ranking reinforces its position as a top hub for advanced learning and innovation.
Keywords
QS World University Rankings, University of Mysore, 247th position, VC, Lokanath