Thursday, September 24, 2026

BDA Apartments

Home Front Page ತೀವ್ರ ಬರಗಾಲ: ಮಧ್ಯಂತರ ಪರಿಹಾರ ಕೋರಿ  ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಡಿಕೆಶಿ

ತೀವ್ರ ಬರಗಾಲ: ಮಧ್ಯಂತರ ಪರಿಹಾರ ಕೋರಿ  ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಡಿಕೆಶಿ

ಬೆಂಗಳೂರು,ಸೆಪ್ಟಂಬರ್‌,24,2026 (www.justkannada.in) ರಾಜ್ಯದಲ್ಲಿ  ತೀವ್ರ ಬರಪರಿಸ್ಥಿತಿ ಆವರಿಸಿರುವ  ಹಿನ್ನೆಲೆಯಲ್ಲಿ ಕೂಡಲೇ ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಿಎಂ ಡಿಕೆ ಶಿವಕುಮಾರ್‌, ರಾಜ್ಯಾದ್ಯಂತ ಬರ ತೀವ್ರಗೊಂಡಿದ್ದು, ಸರ್ಕಾರವು ಹೆಚ್ಚುವರಿಯಾಗಿ 76 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರಿಂದ ಒಟ್ಟು 177 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. 2026ರ ನೈಋತ್ಯ ಮಾನ್ಸೂನ್ ಅಂತ್ಯದ ವೇಳೆಗೆ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಅಂತಿಮವಾಗಿ ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಹೊಸದಾಗಿ ಘೋಷಿಸಲಾದ ಬರಗಾಲಕ್ಕೆ ಸಂಬಂಧಿಸಿದ ನಷ್ಟ ಮತ್ತು ಹಾನಿಗಳ ಮೌಲ್ಯಮಾಪನ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ ಎನ್‌ಡಿಆರ್‌ಎಫ್ ಅಡಿಯಲ್ಲಿ ಆರ್ಥಿಕ ಸಹಾಯ ಕೋರಿ ಹೆಚ್ಚುವರಿ ಜ್ಞಾಪಕ ಪತ್ರ ಸಲ್ಲಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.Drougḩt Drought

ರಾಜ್ಯದ ಬಹುಪಾಲು ಪ್ರದೇಶಗಳಲ್ಲಿ ಕೃಷಿಯು ಮುಂಗಾರು ಮಳೆಯನ್ನೇ ಅವಲಂಬಿಸಿದ್ದು, ಮಳೆ ಕೊರತೆಯಿಂದಾಗಿ ಸುಮಾರು 40 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ.  ಹೀಗಾಗಿ ಎಸ್‌ಡಿಆರ್‌ಎಫ್ (SDRF) ಎರಡನೇ ಕಂತಿನ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡುವಂತೆ ಮತ್ತು ಒಟ್ಟು ಕೋರಿರುವ 3,705.30 ಕೋಟಿ ರೂಪಾಯಿ ನೆರವಿನಲ್ಲಿ ಶೇಕಡಾ 50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ತಕ್ಷಣವೇ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.Drougḩt jk02

 

English Summary
Title

Karnataka Drought: CM DK Shivakumar Seeks ₹1,852 Cr Interim Relief From PM Modi

Short Description
Karnataka Chief Minister DK Shivakumar has written to PM Narendra Modi seeking ₹1,852 crore in immediate interim drought relief. Due to worsening monsoon deficits, the number of drought-hit taluks in the state has surged to 177. The state government urgently requests 50% of its initial ₹3,705.30 crore memorandum to fund input subsidies for massive crop losses, manage critical drinking water shortages, and ensure livestock protection. Shivakumar also pushed for the advance release of the Central share of the SDRF second instalment to accelerate emergency grassroot operations.
Keywords
Drougḩt, CM DK Shivakumar, letter, PM Modi, interim relief.