Tuesday, September 22, 2026

BDA Apartments

ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ: ಈ ಬಗ್ಗೆ ಪರಿಶೀಲನೆ ಮಾಡಿ-ಅಧಿಕಾರಿಗಳಿಗೆ ಸಿಎ...
Home Front Page ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ: ಈ ಬಗ್ಗೆ ಪರಿಶೀಲನೆ ಮಾಡಿ-ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.

ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ: ಈ ಬಗ್ಗೆ ಪರಿಶೀಲನೆ ಮಾಡಿ-ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.

ಹಾಸನ,ನವೆಂಬರ್,7,2023(www.justkannada.in):  ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಪರಿಶೀಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ  ಸೂಚನೆ ನೀಡಿದರು.

ಇಂದು ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ಧರಾಮಯ್ಯ, ಜಿಲ್ಲೆಯಲ್ಲಿ 44 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ. ಸರ್ಕಾರ ಹಣ ಕೊಡಲು ತಯಾರಿರುವಾಗ ನೀವು ಅದನ್ನು ಗಮನಿಸಬೇಕು. ಗೃಹಜ್ಯೋತಿ ಯೋಜನೆಗೂ 63 ಸಾವಿರ ಗ್ರಾಹಕರ ನೋಂದಣಿ ಆಗಬೇಕು. ಎಲ್ಲವನ್ನೂ ಗಮನಿಸಿ ಅವರು ಅರ್ಹರಿದ್ದರೆ ಮಾಡಿ ಇಲ್ಲವಾದರೆ ಕೈಬಿಡಿ  ಎಂದು ಸೂಚಿಸಿದರು.ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ siddaramaiah (2) siddaramaiah 2

ಇಂದು ಸಿಎಂ ಸಿದ್ಧರಾಮಯ್ಯ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿ ಹಾಸನಾಂಬೆ ದರ್ಶನ ಪಡೆದರು.  ಸಿದ್ದರಾಮಯ್ಯ ಅವರಿಗೆ ಸಚಿವ ಕೆಎನ್​ ರಾಜಣ್ಣ, ಶಾಸಕ ಶಿವಲಿಂಗೇಗೌಡ ಸಾಥ್​ ನೀಡಿದರು.

Key words: Grilakshmi scheme -not –reached- CM –Siddaramaiah- instructs- officials