ನ.9ರಂದು ಮೈಸೂರಿನ ಐಶ್(AIISH) ವತಿಯಿಂದ ಮಕ್ಕಳಿಗೆ ಡಿಜಿಟಲ್ ಶ್ರವಣ ಸಾಧನ ವಿತರಣಾ ಕಾರ್ಯಕ್ರಮ.

ಮೈಸೂರು,ನವೆಂಬರ್,7,2023(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು (AIISH) ಬ್ಯಾಂಕ್ ಆಫ್ ಬರೋಡಾದ ಸಹಯೋಗಯೊಂದಿಗೆ ನವೆಂಬರ್ 9ರಂದು ಮಕ್ಕಳಿಗೆ ಡಿಜಿಟಲ್ ಶ್ರವಣ ಸಾಧನ ವಿತರಣಾ ಕಾರ್ಯಕ್ರಮವನ್ನ ಆಯೋಜಿಸಿದೆ.

ಸಂಸ್ಥೆಯ ಸೆಮಿನಾರ್ ಹಾಲ್ ಅಕಾಡಮಿಕ್ ಬ್ಲಾಕ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಆಯ್ದ ಫಲಾನುಭವಿಗಳಿಗೆ  40 ಡಿಜಿಟಲ್ ಶ್ರವಣಸಾಧನವನ್ನ ಮೈಸೂರಿನ ಮೇಯರ್ ಶಿವಕುಮಾರ್ ವಿತರಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯಸ್ಥರಾದ ಅನುಜ್ ಅವಸ್ತಿ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದು ಐಶ್(AIISH)ನಿರ್ದೇಶಕಿ ಡಾ.ಎಂ ಪುಷ್ಪಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಪಾಲುದಾರಿಕೆಯೊಂದಿಗೆ ಐಶ್ ಸಂಸ್ಥೆಯು ಒಂದು ಮತ್ತು ಎರಡು ತಿಂಗಳ ಮಕ್ಕಳಿಂದ ಹಿಡಿದು ಎರಡು ವರ್ಷದವರೆಗಿನ ಶ್ರವಣ ದೋಷವುಳ್ಳ ಮಕ್ಕಳಿಗೆ ( ಬಿಪಿಎಲ್ ಕಾರ್ಡುದಾರರಿಗೆ) ಈ ಹೆಚ್ಚಿನ ಮೊತ್ತದ ಡಿಜಿಟಲ್ ಶ್ರವಣ ಸಾಧನವನ್ನ(40 ಶ್ರವಣ ಸಾಧನಗಳು) ಕಡಿಮೆ ಬೆಲೆಗೆ ವಿತರಿಸಲಾಗುತ್ತಿದೆ. ಅಲ್ಲದೆ ಡಿಜಿಟಲ್ ಶ್ರವಣ ಸಾಧನವನ್ನ ಪಡೆದ ಮಕ್ಕಳಿಗೆ 6 ತಿಂಗಳವರೆಗೆ ಥೆರಪಿ ನೀಡಲಾಗುತ್ತಿದೆ.

Key words: Digital hearing aid –distribution- program -children –AIISH-Mysore