ಜಾತಿಗಣತಿ ವರದಿ ಬಿಡುಗಡೆಯಾದ್ರೆ ಒಳ್ಳೆಯದು – ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಅಕ್ಟೋಬರ್,4,2023(www.justkannada.in):  ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾದ ಬೆನ್ನಲ್ಲೆ ಇದೀಗ ಕರ್ನಾಟಕ ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹಸಚಿವ ಡಾಜಿ.ಪರಮೇಶ್ವರ್, ಜಾತಿಗಣತಿ ಬಿಡುಗಡೆಯಾದ್ರೆ ಒಳ್ಳೆಯದು  ಎಂದಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾಜಿ.ಪರಮೇಶ್ವರ್, ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾಡೋಣ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.  ಜಾತಿ ಗಣತಿ ನಡೆಸಲು ಅಂದಾಜು 100 ಕೋಟಿ ರೂ.ಗೆ ಹೆಚ್ಚು ಖರ್ಚಾಗಿದೆ.  ಇಷ್ಟು ಹಣ ಖರ್ಚು ಮಾಡಿ  ವರದಿ ಬಿಡುಗಡೆ ಮಾಡದಿದ್ದರೇ ವ್ಯರ್ಥ ಅಲ್ಲವಾ..? ಜಾತಿಗಣತಿ ಬಿಡುಗಡೆಯಾದ್ರೆ ಒಳ್ಳೆಯದು  ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿಬಂದಿದೆ. ಸರ್ಕಾರ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ ಎಂದರು.

ನಾನು ಇನ್ನೂ ಪತ್ರ ನೋಡಿಲ್ಲ, ಒಂದು ವೇಳೆ ಪತ್ರ ಬರೆದ್ರೂ ತಪ್ಪಿಲ್ಲ

ಇನ್ನು ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದರೆ ನಮಗೆ ಕಳುಹಿಸಿಕೊಡುತ್ತಾರೆ. ಆ ಮನವಿ ನನಗೆ ಬರುತ್ತದೆ, ಇಲ್ಲದಿದ್ದರೇ ಇಲಾಖೆ ಡಿಜಿಗೆ ಕಳುಹಿಸುತ್ತಾರೆ. ಆಗ ನಾವು ಕ್ಯಾಬಿನೆಟ್​​ ಸಬ್​ ಕಮಿಟಿ ಮುಂದೆ ಚರ್ಚೆ ಮಾಡುತ್ತೇವೆ. ಏನೇನು ಸೆಕ್ಷನ್ ಹಾಕಿರುತ್ತಾರೆ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಅಂತಿಮವಾಗಿ ಕೇಸ್ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡುತ್ತೆ. ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ನಾವು ಏನು‌ ಮಾಡಬೇಕು. ನಾನು ಇನ್ನೂ ಪತ್ರ ನೋಡಿಲ್ಲ, ಒಂದು ವೇಳೆ ಪತ್ರ ಬರೆದ್ರೂ ತಪ್ಪಿಲ್ಲ ಎಂದರು.

Key words:  good – caste census -report -release – Home Minister -Dr. G. Parameshwar