ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ 23 ಯೋಧರು ಕಣ್ಮರೆ.

ಸಿಕ್ಕಿಂ,ಅಕ್ಟೋಬರ್,4,2023(www.justkannada.in):   ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿದ್ದು ಭಾರತೀಯ ಸೇನೆಯ 23 ಯೋಧರು ಕಣ್ಮರೆಯಾಗಿದ್ದಾರೆ.

ಲಾಚೆನ್‌ ಕಣಿವೆಯಲ್ಲಿ  ದಿಢೀರ್ ಮೇಘಸ್ಫೋಟ ಸಂಭವಿಸಿದ್ದು,  ಇದರಿಂದಾಗಿ ತೀಸ್ತಾ ನದಿಯು ಅಪಾಯದ ಮಟ್ಟ ಮೀರಿ ಹರಿದಿದೆ., ನದಿಯ ನೀರು ದಿಢೀರನೆ ಸೇನೆಯ ನೆಲೆಗೆ ನುಗ್ಗಿದ ಕಾರಣ 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬರ್ದಾಂಗ್‌ನಲ್ಲಿ ನಿಲ್ಲಿಸಿದ್ದ ಸೇನೆಯ ವಾಹನಗಳು ಕೂಡ ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ.

ಮಧ್ಯರಾತ್ರಿ 1.30ರ ವೇಳೆಗೆ ತೀಸ್ತಾ ನದಿ ಪ್ರವಾಹದಲ್ಲಿ ಸೇನಾವಾಹನಗಳು ಕೊಚ್ಚಿ ಹೋಗಿದ್ದು ಯೋಧರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಯೋಧರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Key words: 23 soldiers -missing –flood- Sikkim