“ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ದೇಸಿ ತಳಿಗಳ ಸಂರಕ್ಷಣೆಗೆ ನಾಂದಿ” : ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು,ಫೆಬ್ರವರಿ,17,2021(www.justkannada.in) :  ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಿದ್ದಕ್ಕೆ ಯದುವೀರ್ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಕಾಯ್ದೆಯ ಅನುಷ್ಠಾನ ನಮ್ಮಲ್ಲಿರುವ ದೇಸಿ ತಳಿಗಳ ಸಂರಕ್ಷಣೆಗೆ ನಾಂದಿ ಹಾಡಿದಂತಾಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹರ್ಷ ವ್ಯಕ್ತಪಡಿಸಿದ್ದಾರೆ.

jkಮೈಸೂರಿನ ಅರಮನೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್  ಅವರು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿ ಮಾಡಿ ಅಮೃತ್ ಮಹಲ್ ತಳಿಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭ ಮಾತನಾಡಿದ ರಾಜವಂಶಸ್ಥ ಯದುವೀರ್, ಸುಮಾರು 45 ಸಾವಿರ ಎಕರೆ ಗೋಮಾಳ ಅಮೃತ್ ಮಹಲ್ ತಳಿಗಳ ಅಭಿವೃದ್ಧಿಗೆ ಮಿಸಲಿಡಲಾಗಿತ್ತು. ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಗಳ ಸಂರಕ್ಷಣೆಗೆ ಎಲ್ಲ ರೀತಿಯ ಸಹಕಾರವನ್ನು ತಮ್ಮ ಬೇರುಂಡ ಫೌಂಡೇಷನ್ ವತಿಯಿಂದ ನೀಡುತ್ತೇವೆ ಎಂದು ಸಚಿವರಿಗೆ ಹೇಳಿದರು.

ಯುದ್ಧದ ಸಂದರ್ಭದಲ್ಲಿ ಅಮೃತ್ ಮಹಲ್ ಗೋವುಗಳನ್ನು ಬಳಸಿಕೊಂಡು ವೈರಿಗಳನ್ನು ಹಿಮ್ಮೆಟ್ಟಿಸಿದ ಉದಾಹರಣೆಗಳಿವೆ ಎಂದು ಯದುವೀರ್ ಸ್ಮರಿಸಿದರು.

Cow,Slaughter,Prohibition Act,enforcement,Desi,breeds,conservation,Dynasty,Yadavir,Krishna,Chamaraja,Wodeyar

ಅಮೃತ್ ಮಹಲ್ ಕಾವಲಿನಲ್ಲಿ ಸುಮಾರು 5000 ಎಕರೆಯಲ್ಲಿ ಮೇವು ಬೆಳೆಯುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.

key words : Cow-Slaughter-Prohibition Act-enforcement-Desi-breeds-conservation-Dynasty-Yadavir-Krishna-Chamaraja-Wodeyar