Wednesday, August 19, 2026

BDA Apartments

Home Cinema 100 ಜನರಿಗೆ 10 ಸಾವಿರ ಮೌಲ್ಯದ ಗಿಫ್ಟ್ ಕೊಡುತ್ತಿದ್ದಾರೆ ನಟ ವಿಜಯ್ ದೇವರಕೊಂಡ

100 ಜನರಿಗೆ 10 ಸಾವಿರ ಮೌಲ್ಯದ ಗಿಫ್ಟ್ ಕೊಡುತ್ತಿದ್ದಾರೆ ನಟ ವಿಜಯ್ ದೇವರಕೊಂಡ

ಬೆಂಗಳೂರು, ಡಿಸೆಂಬರ್ 30, 2021 (www.justkannada.in): ನಟ ವಿಜಯ್ ದೇವರಕೊಂಡ  ದೇವರು ಸಂತಾ’ ಹೆಸರಿನಲ್ಲಿ ₹ 10 ಲಕ್ಷ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ.

ಹೌದು. ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ವಿಜಯ್ ದೇವರಕೊಂಡ 100 ಜನರಿಗೆ ತಲಾ ₹ 10 ಸಾವಿರ ಮೌಲ್ಯದ ಉಡುಗೊರೆ (ಅಥವಾ ಹಣ) ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ಯಾರು? ಹೇಗೆ? ಉಡುಗೊರೆ ಪಡೆಯಬಹುದು ಎಂಬ ಮಾಹಿತಿ ನೀಡಿದ್ದಾರೆ.

ವಿಜಯ್‌ ದೇವರಕೊಂಡ ನಡೆಸುತ್ತಿರುವ ಬಟ್ಟೆ ಕಂಪೆನಿಯ ರೌಡಿ ಸಂಘದ 50 ಜನರಿಗೆ ಹಾಗೂ ಇತರೆ 50 (ಯಾರೂ ಬೇಕಾದರೂ) ಜನರಿಗೆ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.

ಜನವರಿ 1ರಂದು ಗಿಫ್ಟ್‌ ಅನ್ನು ವಿಜಯ್‌ ದೇವರಕೊಂಡ ಅವರೇ ನೀಡಲಿದ್ದಾರೆ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ.