ಆಟೋ ಡ್ರೈವರ್ ಆದ ಸಲ್ಮಾನ್ ಖಾನ್ !

ಬೆಂಗಳೂರು, ಡಿಸೆಂಬರ್ 30, 2021 (www.justkannada.in): ನಟ ಸಲ್ಮಾನ್‌ ಖಾನ್‌ ಆಟೋ ಓಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾವು ಕಚ್ಚಿದ ಬಳಿಕ ಚೇತರಿಸಿಕೊಂಡಿರುವ ಸಲ್ಲು ಭಾಯ್ ಆಟೋ ಓಡಿಸುತ್ತಿರುವ ವಿಡೀಯೋವೊಂದನ್ನು ಶೇರ್ ಮಾಡಿದ್ದರು. ಅದೀಗ ಎಲ್ಲೆಡೆ ಹರಿದಾಡುತ್ತಿದೆ.

ಮಹಾರಾಷ್ಟ್ರದ ರಾಯಘಡ್​ ಜಿಲ್ಲೆಯಲ್ಲಿರುವ ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ ಹೊಂದಿದ್ದಾರೆ. ರಾಯಘಡ್‌ ನಗರದಲ್ಲಿ ರಾತ್ರಿ ವೇಳೆಯಲ್ಲಿ ಸ್ಥಳೀಯ ಆಟೋ ಚಾಲಕನ ಕಡೆಯಿಂದ ಆಟೋ ಪಡೆದು ಚಾಲನೆ ಮಾಡಿದ್ದಾರೆ.

ಸಲ್ಮಾನ್ ಆಟೋ ಓಡಿಸುತ್ತಿರುವ ದೃಶ್ಯವನ್ನು ಅಭಿಮಾನಿಯೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.