Monday, September 21, 2026

BDA Apartments

#gobackmodi ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ BDA JK_Adv BDA Adv
Home Front Page #gobackmodi ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ

#gobackmodi ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ

ಚೆನ್ನೈ, ಅಕ್ಟೋಬರ್ 11, 2019 (www.justkannada.in): ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭೇಟಿ ಇಡೀ ದೇಶದ ಗಮನ ಸೆಳೆದಿದೆ. ಆದರೆ ಪ್ರಧಾನಿಗೆ ಮಾತ್ರ ತಮಿಳುನಾಡಿನಲ್ಲಿ ನಿರೀಕ್ಷಿತ ಸ್ವಾಗತ ದೊರಕಿಲ್ಲ.

ಟ್ವಿಟ್ಟರ್ ನಲ್ಲಿ TNWelcomesModi ಗಿಂತ ಹೆಚ್ಚಾಗಿ GoBackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿರುವುದೇ ಅದಕ್ಕೆ ಸಾಕ್ಷಿ! ಸದ್ಯಕ್ಕೆ GoBackModi ಟ್ವಿಟ್ಟರ್ ನ ಇಂಡಿಯಾ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿದೆ!

ಇದಕ್ಕೂ ಮುನ್ನವೂ ಮೋದಿ ತಮಿಳುನಾಡಿಗೆ ಆಗಮಿಸಿದಾಗೆಲ್ಲ ಇಂಥದೇ ಗೋ ಬ್ಯಾಕ್ ‘ಸ್ವಾಗತ’ ಲಭ್ಯವಾಗಿತ್ತು. ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ.

ಪ್ರಾದೇಶಿಕ ಪಕ್ಷಗಳಿಗೆ ಬೆಲೆ ಇಲ್ಲದಂತಾಗಿದೆ, ಹಿಂದಿ ಹೇರಿಕೆ ಎಂಬಿತ್ಯಾದಿ ಆರೋಪಗಳಿಂದಾಗಿ ತಮಿಳುನಾಡಿನ ಜನ ಪ್ರಧಾನಿ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸುವ ಮನಸ್ಥಿತಿಯಲ್ಲಿಲ್ಲ.