Friday, August 7, 2026

BDA Apartments

Home Front Page ಹೆಚ್.ಡಿಕೆ ನೀಡಿದ್ದ ಭರವಸೆಯನ್ನ ಸಿಎಂ ಬಿಎಸ್ ವೈ ಈಡೇರಿಸುತ್ತಾರೆ- ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ…

ಹೆಚ್.ಡಿಕೆ ನೀಡಿದ್ದ ಭರವಸೆಯನ್ನ ಸಿಎಂ ಬಿಎಸ್ ವೈ ಈಡೇರಿಸುತ್ತಾರೆ- ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ…

ಮಂಡ್ಯ,ಅ,11,2019(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿದ್ದ ಭರವಸೆಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಈಡೇರಿಸುತ್ತಾರೆ ಎಂದು ಕೆ.ಆರ್ ಪೇಟೆ ಅನರ್ಹ ಶಾಸಕ ನಾರಾಯಣಗೌಡ ತಿಳಿಸಿದರು.

ಕೆ.ಆರ್ ಪೇಟೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣಗೌಡ, ಸಂತೇಬಾಚಹಳ್ಳಿ ಏತ ನೀರಾವರಿ ಯೋಜನೆಗೆ ಸಿಎಂ ಬಿಎಸ್  ಯಡಿಯೂರಪ್ಪ 212 ಕೋಟಿ ನೀಡಿದ್ದಾರೆ. ಹಾಗೆಯೇ ರಸ್ತೆ ಒಳಚರಂಡಿ ಅಭಿವೃದ್ಧಿಗೆ 33 ಕೋಟಿ ಮತ್ತು ಬೂಕನಕೆರೆಗೆ 23 ಕೋಟಿ ರೂ ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಹೆಚ್.ಡಿ ಕುಮಾರಸ್ವಾಮಿ ನಮಗೆ ಅನುದಾನ ನೀಡದಿದ್ದಕ್ಕೆ ನಾವು ಮತ್ತು ನಮ್ಮ ಶಾಸಕರು ರಾಜೀನಾಮೆ ನೀಡಿ ಹೊರ ಬಂದವು ಎಂದು ಅನರ್ಹ ಶಾಸಕ ನಾರಾಯಣಗೌಡ ತಿಳಿಸಿದರು.

Key words: CM -BSY -fulfills -promise -HDK – KR pete-Narayana Gowda