ನಮಗೆ ಎರಡು ವಾರ ಸಮಯ ಕೊಡಿ: ಮೈಸೂರಿನಲ್ಲಿ ಕೊರೋನಾ ನಿಯಂತ್ರಿಸುತ್ತೇವೆ- ಕಾಲಾವಕಾಶ ಕೇಳಿದ ಡಿಸಿ ರೋಹಿಣಿ ಸಿಂಧೂರಿ…

ಮೈಸೂರು,ಅಕ್ಟೋಬರ್,5,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಅವರು   ಕೋವಿಡ್ ನಿಯಂತ್ರಿಣಕ್ಕೆ ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ.jk-logo-justkannada-logo

ಕೊರೊನಾ‌ ನಿಯಂತ್ರಣ ಸಂಬಂಧ ಇಂದು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ  ಮೈಸೂರಿನಲ್ಲಿ ಕೊರೋನಾ ನಿಯಂತ್ರಣ ತರಲು ಎರಡು ವಾರ ಕಾಲಾವಕಾಶ ಕೊಡಿ ಎಂದು  ಮೈಸೂರು ಡಿಸಿ ರೋಹಿಣಿ ಸಿಂಧೂರಿ ಸಚಿವ ಸುಧಾಕರ್ ಬಳಿ ಮನವಿ ಮಾಡಿದರು.

.give-two-weeks-control-corona-mysore-dc-rohini-sindhuri-minister-sudhakar

ನಮಗೆ ಎರಡು ವಾರ ಸಮಯ ಕೊಡಿ. ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತರುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾಲಾವಕಾಶ ಕೇಳಿದರು.  ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ ಸುಧಾಕರ್,  ಜಿಲ್ಲಾಧಿಕಾರಿಗಳು ಬಹಳ ವಿಶ್ವಾಸದಿಂದ ಎರಡು ವಾರಗಳ  ಕಾಲ ಕಾಲಾವಕಾಶ ಕೇಳಿದ್ದಾರೆ, ನಾವು ಕೊಟ್ಟಿದ್ದೇವೆ ಎಂದರು.

 

Key words: Give- two weeks-control – corona –Mysore-DC Rohini Sindhuri – minister-Sudhakar