ಅಭಿವೃದ್ದಿ ಯೋಜನೆ ಹೆಸರಲ್ಲಿ ಹಣ ಲೂಟಿ: ಬಿಜೆಪಿ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ.

ಹಾಸನ,ಮಾರ್ಚ್,10,2023(www.justkannada.in): ಅಭಿವೃದ್ದಿ ಯೋಜನೆ ಹೆಸರಿನಲ್ಲಿ ಬಿಜೆಪಿ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಳಸಾ ಬಂಡೂರಿ ಯೋಜನೆಗೆ ಹಣ ಎಲ್ಲಿ ಇಟ್ಟಿದ್ದಾರೆಂದು ಹೇಳಲಿ. ಅಭಿವೃದ್ದಿ ಯೋಜನೆ ಹೆಸರನಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಹೀಗಂತ ಅವರದ್ಧೇ ಸರ್ಕಾರದ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಯತ್ನಾಳ್ ಕೂಡ ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಬಗ್ಗೆ ಮಾತನಾಡಲು ಎರಡು ಪಕ್ಷಗಳಿಗೆ ಸರಕು ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹೀಗಂತಾ ಜನರೇ ಹೇಳುತ್ತಿದ್ದಾರೆ. ಮೊದಲು ಇದನ್ನ ಸರಿಪಡಿಸಿಕೊಳ್ಳಲಿ ಅಮೇಲೆ ಜೆಡಿಎಸ್ ಬಗ್ಗೆ ಮಾತನಾಡಲಿ ಎಂದು ಟಾಂಗ್ ನೀಡಿದರು.

ಉತ್ತರ ಕರ್ನಾಟಕ ಸಮಸ್ಯೆಗೆ ಸರ್ಕಾರದ ಕೊಡುಗೆ ಇಲ್ಲ . ಮೂಲ ಸೌಕರ್ಯಗಳ ಸಮಸ್ಯೆಯಿಂದ ಅಲ್ಲಿನ ಜನ ನರಳುತ್ತಿದ್ದಾರೆ. ಮಾಡಾಳ್ ಪುತ್ರನ ಮನೆಯಲ್ಲಿ ಕೋಟ್ಯಾಂತರ ರೂ. ಹಣ ಪತ್ತೆಯಾಗಿದೆ.  ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಏನು ಹೇಳುತ್ತಾರೆ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

Key words: Looting-money – name -development – Former CM -HD Kumaraswamy- aagainst -BJP