“ತೋಟಗಾರಿಕೆ ಮೇಳ ; ಮೂರನೇ ದಿನದ ಗೋಷ್ಠಿ ಮುಖ್ಯಾಂಶಗಳು”

ಬೆಂಗಳೂರು,ಫೆಬ್ರವರಿ,೧೦,2021(www.justkannada.in) : ರಾಷ್ಟ್ರಿಯ ತೊಟಗಾರಿಕೆ  ಮೇಳದ ಮೂರನೇ ದಿನವಾದ ಬುಧವಾರ ಬಿಹಾರ, ಜಾರ್ಕಂಡ್‌ , ಒಡಿಸ್ಸಾ, ಪಶ್ಚಿಮ ಬಂಗಾಳ, ಅಂಡಾಮಾನ್‌ ಮತ್ತು ನಿಕೋಬಾರ್‌ , ಅಸ್ಸಾಂ, ಅರುಣಾಚಲ ಪ್ರದೇಶ್‌ , ಮತ್ತು ಸಿಕ್ಕಿಮ್‌ ರಾಜ್ಯಗಳ ರೈತರು ಎದುರಿಸುತ್ತಿರುವ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಗೋಷ್ಠಿ ನಡೆಯಿತು.jk

ಐಐಎಚ್‌ ಆರ್‌ ಸಂಸ್ಥೆಯ ವಿಜ್ಞಾನಿಗಳಾದ ಡಾ.ಅನಿಲ್‌ ಕುಮಾರ್‌ ನಾಯರ್‌, ಡಾ. ಪಿ.ಸಿ. ತ್ರಿಪಾಟಿ, ಡಾ.ರಾಜೀವ್‌ ಕುಮಾರ್‌ ಅವರು ಗೋಷ್ಠಿ ನಡೆಸಿಕೊಟ್ಟರು. ಐಐಎಚ್‌ಆರ್‌ ನಿರ್ದೇಶಕ ಡಾ.ಎಂ.ಆರ್.‌ದಿನೇಶ್‌ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದರು.

ಈ ಎಲ್ಲಾ ರಾಜ್ಯಗಳ ರೈತರು ಸಾಮಾನ್ಯವಾಗಿ ಬೆಳೆಯುವ ಮಾವು, ಸೀಬೆ, ಪಪ್ಪಾಯಿ, ಬಾಳೆ, ಬೆಲ್ಲದ ಹಣ್ಣು ,ದಾಳಿಂಬೆ, ಸೀತಾಫಲ, ಹಲಸು, ಮೆಣಸು, ಟೊಮೆಟೋ, ಅಣಬೆ ಮತ್ತು ಈರುಳ್ಳಿ ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲಾಯಿತು.

ರೈತರ ಸಾಮಾನ್ಯ ಪ್ರಶ್ನೆಗಳಾದ ಬೀಜ ಮತ್ತು ತಳಿಗಳ ಲಬ್ಯತೆ ಕುರಿತು ಸ್ಥಳದಲ್ಲಿಯೇ ಉತ್ತರ ನೀಡಲಾಯಿತು. ಸಮಗ್ರ ಕೀಟ ನಾಶಕ ನಿರ್ವಹಣೆ, ಉಪ ಉತ್ಪನ್ನಗಳ ಉತ್ಪಾದನೆ ಕುರಿತು ರೈತರು ಆನ್‌ ಲೈನ್‌ ನಲ್ಲಿ ವಿಜ್ಞಾನಿಗಳಿಂದ ಅಗತ್ಯ ಮಾಹಿತಿ ಪಡೆದರು.

ದಾಳಿಂಬೆ,-ಲಿಚಿ ಕಾಯಿ ಸೀಳುವಿಕೆ ಸಮಸ್ಯೆ (ಫ್ರೂಟ್‌ ಕ್ರಾಕಿಂಗ್)

ಉತ್ತರ ಭಾರತೀಯ ರೈತರಿಗೆ ಐಐಎಚ್‌ ಆರ್‌ ವಿಜ್ಞಾನಿಗಳು ದಾಳಿಂಬೆ, ಮತ್ತು ಲಿಚಿ ಹಣ್ಣಿನ ಬೆಳೆಗಳ ಸೀಳುವಿಕೆ ಸಮಸ್ಯೆ ಕುರಿತು ಪರಿಹಾರ ಸೂಚಿಸಿದರು. ಬಿಹಾರ, ಜಾರ್ಕಂಡ್‌ , ಒಡಿಸ್ಸಾ, ಪಶ್ಚಿಮ ಬಂಗಾಳ ರೈತರು ಕಾಯಿ ಸೀಳುವಿಕೆ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.

Gardening Fair-Highlights-Third-Day-Concert 
ಕೃಪೆ : internet

ಈ ಕುರಿತು ವಿಜ್ಞಾನಿಗಳು ನೀರಾವರಿ ನಿರ್ವಹಣೆ ಯನ್ನು ಯಾವ ರೀತಿ ಮಾಡಬೇಕು ಎನ್ನುವ ಕುರಿತು ಮಾಹಿತಿ ಒದಗಿಸಿದರು. ಬೇಸಿಗೆ ಮತ್ತು ಚಳಿಗಾಲದಲ್ಲಿ ನೀರನ್ನು ಈ ಎರಡು ಬೆಳೆಗಳಿಗೆ ಯಾವ ರೀತಿ ಉಣಿಸಬೇಕು ಮತ್ತು ಕಾಯಿ ಸೀಳುವಿಕೆಯನ್ನು ತಡೆಯಬೇಕು ಎನ್ನುವ ಕುರಿತು ವಿಜ್ಞಾನಿಗಳು ಮಾಹಿತಿ ಒದಗಿಸಿದರು. ‌

ಈ ಎಲ್ಲ ರಾಜ್ಯಗಳ ೨೪೦ ಕೆವಿಕೆ ಗಳ ಮೂಲಕ ಸುಮಾರು ೨೪,೦೦೦ ರೈತರು ಆನ್‌ ಲೈನ್‌ ಗೋಷ್ಠಿಯಲ್ಲಿ ಪಾಲ್ಗೊಂಡರು.

key words : Gardening Fair-Highlights-Third-Day-Concert