ಅಂಗಾಂಗ ದಾನ ಮಾಡಿದ ಬಾಲಿವುಡ್ ನಟ ಬಿಗ್ ಬಿ..

ಮುಂಬೈ,ಸೆಪ್ಟಂಬರ್, 30,2020(www.justkannada.in): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಂಗಾಂಗ ದಾನ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಘೋಷಣೆ ಮಾಡಿದ್ದಾರೆ .  ಕೋಟಿನ ಮೇಲೆ ಹಸಿರು ರಿಬ್ಬನ್ ಧರಿಸಿರುವ  ಬಿಗ್ ಬಿ, ನಾನು ಅಂಗಾಂಗ ದಾನ ಮಾಡುತ್ತಿದ್ದೇನೆ . ಆದರ ಪವಿತ್ರತೆಗಾಗಿ ಈ ರಿಬ್ಬನ್ ಧರಿಸಿದ್ದೇನೆ ಎಂದಿದ್ದಾರೆ .

ಅನೇಕ ಅಭಿಮಾನಿಗಳು ಬಿಗ್ ಬಿ ನಡೆದ ದಾರಿಯಲ್ಲಿ ನಡೆಯುವುದಾಗಿ ತಮ್ಮ ಅಂಗಾಂಗ ದಾನದ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದಾರೆ.