Sunday, September 20, 2026

BDA Apartments

ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ದೆಹಲಿಯಲ್ಲಿ ಸಂಪೂರ್ಣ ಕರ್ಫ್ಯೂ ಜಾರಿ… BDA...
Home Front Page ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ದೆಹಲಿಯಲ್ಲಿ  ಸಂಪೂರ್ಣ ಕರ್ಫ್ಯೂ ಜಾರಿ…

ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ದೆಹಲಿಯಲ್ಲಿ  ಸಂಪೂರ್ಣ ಕರ್ಫ್ಯೂ ಜಾರಿ…

ನವದೆಹಲಿ,ಏಪ್ರಿಲ್,19,2021(www.justkannada.in):  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಕೊರೊನಾ ವೈರಸ್  ಹೆಚ್ಚುತ್ತಿರುವ ಹಿನ್ನೆಲೆ  ಕೊರೋನಾ ನಿಯಂತ್ರಣಕ್ಕಾಗಿ ನಿಯಂತ್ರಿಸಲು ಇಂದು ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ.jk

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕಂಪ್ಲೀಟ್ ಕರ್ಫ್ಯೂ ಇರಲಿದೆ ಎಂದು ತಿಳಿಸಿದ್ದಾರೆ.full curfew - Delhi -week -from –tonight-CM arvind kejriwal

 ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಲಾಕ್ ಡೌನ್ ನಿಂದ ಕೋವಿಡ್ ತಡೆಯಲು ಸಾಧ್ಯವಿಲ್ಲ, ಆದರೆ ಸಣ್ಣ ಅವಧಿಯ ಲಾಕ್ ಡೌನ್ ನಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ.  ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಮತ್ತು ಹಾಸಿಗೆಗಳ ತೀವ್ರ ಕೊರತೆ’ ಉಂಟಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

Key words: full curfew – Delhi -week -from –tonight-CM arvind kejriwal