Monday, September 21, 2026

BDA Apartments

ಫ್ರೂಟ್ಸ್ ರೈತರ ಐಡಿ ಕೇಂದ್ರ ಸರ್ಕಾರದ ಐಡಿಗೆ ಅಪ್ ಡೇಟ್ ಮಾಡಲು ಸೂಚನೆ BDA JK_Adv BDA Adv
Home Front Page ಫ್ರೂಟ್ಸ್ ರೈತರ ಐಡಿ ಕೇಂದ್ರ ಸರ್ಕಾರದ ಐಡಿಗೆ ಅಪ್ ಡೇಟ್ ಮಾಡಲು ಸೂಚನೆ

ಫ್ರೂಟ್ಸ್ ರೈತರ ಐಡಿ ಕೇಂದ್ರ ಸರ್ಕಾರದ ಐಡಿಗೆ ಅಪ್ ಡೇಟ್ ಮಾಡಲು ಸೂಚನೆ

ಬೆಂಗಳೂರು ಗ್ರಾಮಾಂತರ, ಫೆಬ್ರವರಿ, 24,2026 (www.justkannada.in): ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ ಕಿಸಾನ್ ಯೋಜನೆಯು ಸೇರಿದಂತೆ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಕಡ್ಡಾಯವಾಗಿ ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಕೊಳ್ಳುವುದು ಅಗತ್ಯವಿರುತ್ತದೆ.  ಆದರಿಂದ ಜಮೀನು ಹೊಂದಿರುವ ಎಲ್ಲಾ ರೈತರು ಫ್ರೂಟ್ಸ್ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ(Central ID)ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.

ತೋಟಗಾರಿಕೆ/ ಕೃಷಿ/ ಗ್ರಾಮಒನ್/ ಕಂದಾಯ/ ಪಶುಸಂಗೋಪನೆ ಇಲಾಖೆಗಳಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಜಮೀನು ವಿವರಗಳೊಂದಿಗೆ ಇಲಾಖೆಗಳನ್ನು ಸಂಪರ್ಕಿಸಬಹುದು.

ಪಿ.ಎಂ ಕಿಸಾನ್ ಬೆಳೆ ವಿಮೆ, MSP ಹಣ, ಹಾಗೂ ಇತರೆ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಈ ಐಡಿ ಕಡ್ಡಾಯವಾಗಿರುತ್ತದೆ.  ಈ ಐಡಿ ಮಾಡಿಸಿಕೊಳ್ಳಲು ಫೆಬ್ರವರಿ 27 ಕೊನೆಯ ದಿನಾಂಕವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು ತಕ್ಷಣವೇ ನೋಂದಣಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಬಿ.ಎಂ ದೂರವಾಣಿ ಸಂ. 9480461234, ದೊಡ್ಡಬಳ್ಳಾಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಶಿಕಲಾಟಿ.ಆರ್ ದೂರವಾಣಿ ಸಂ. 9482129648,

ಹೊಸಕೋಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ದೀಪಾ ಎಂ.ಎಸ್ ದೂರವಾಣಿ ಸಂ. 9880210892, ನೆಲಮಂಗಲ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹರೀಶ್ ಆರ್. ದೂರವಾಣಿ ಸಂ.  9880461607 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Update, fruit farmers,  IDs ,central government ID