Thursday, October 15, 2026

Dasara Wishes

Happy Dasara
Home Front Page ರಾಜ್ಯದಲ್ಲಿ ಡ್ರಗ್ಸ್ ಹಾವಳಿ: ಸಮಗ್ರ ತನಿಖೆಗೆ MLC  ಸಿ.ಟಿ ರವಿ ಆಗ್ರಹ

ರಾಜ್ಯದಲ್ಲಿ ಡ್ರಗ್ಸ್ ಹಾವಳಿ: ಸಮಗ್ರ ತನಿಖೆಗೆ MLC  ಸಿ.ಟಿ ರವಿ ಆಗ್ರಹ

ಬೆಂಗಳೂರು,ಫೆಬ್ರವರಿ,25,2026 (www.justkannada.in):  ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ರಾಜ್ಯ ಉಡ್ತಾ ಕರ್ನಾಟಕ ಆಗುತ್ತಿದೆ. ದಾವಣಗೆರೆ, ಮೈಸೂರು ಸಹಿತ ಎಲ್ಲ ಕಡೆ ಡ್ರಗ್ಸ್‌ ಸಿಗುತ್ತಿದ್ದು,  ಇದೊಂದು ರಾಕೆಟ್‌ ಇದ್ದಂತೆ ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು  ಎಂದು ಹೇಳಿದರು.

ರಾಜ್ಯ ಸರಕಾರಕ್ಕೆ ಈ ಬಗ್ಗೆ ಗಂಭೀರತೆ ಇಲ್ಲ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿ ಸಂಕೇತ್‌ನನ್ನು ಕಾರಣ ಇಲ್ಲದೆ ಹತ್ಯೆ ಮಾಡಿದ್ದಾರೆ. ಸಂಕೇತ್‌ ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

Key words Drug, state, MLC, CT Ravi , investigation