ಮೀಸಲಾತಿ ಕೊಡದಿದ್ರೆ ಶ್ರೀಗಳ ಮಾತಿಗೆ ನಾವು ಬದ್ಧ- ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ…

ಯಾದಗಿರಿ ಡಿ,25,2019(www.justkannada.in): ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡುವ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮೀಸಲಾತಿ ಕೊಡದಿದ್ದರೇ ನಮ್ಮ ಸಮುದಾಯದ ಸ್ವಾಮೀಜಿಗಳ ಮಾತಿಗೆ ನಾವು ಬದ್ಧ ಎಂದು ಹೇಳಿಕೆ ನೀಡಿದ್ದಾರೆ.

ಯಾದಗಿರಿ ಶಹಪುರದಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೂರಕ್ಕೆನೂರು 7.5 ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಮೀಸಲಾತಿ ಕೊಡದಿದ್ದರೆ ಶ್ರೀಗಳ ಮಾತಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸ್ವಾಮೀಜಿಗಳ ಮಾತನ್ನು ಯಾವುದೇ ಕಾರಣಕ್ಕೂ ನಾವು ಮೀರುವುದಿಲ್ಲ.  ಜಸ್ಟೀಸ್ ನೇತೃತ್ವದ ಸಮಿತಿ ವರದಿ ನೀಡಿದ ಬಳಿಕ ಸಿಎಂ ಬಿಎಸ್ ವೈ ಬಳಿ ಚರ್ಚಿಸುತ್ತೇನೆ. ಬಳಿಕ ಮೀಸಲಾತಿ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಡಿಸಿಎಂ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಜನತೆಯ ಅಭಿಪ್ರಾಯ. ತಾವು ಅದನ್ನು ತಿರಸ್ಕರಿಸುವುದಿಲ್ಲ. ನನೆಗ ಡಿಸಿಎಂ ಸ್ಥಾನ ನೀಡುವ ವಿಚಾರ ಹೈಕಮಾಂಡ್ ಬಿಟ್ಟಿದ್ದು. ನಮ್ಮ ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

Key words: yadgir- Health Minister- Sriramulu- Reservation