“ಮೈಸೂರಿನಲ್ಲಿ ಜೋಡಿ ಕೊಲೆ ಪ್ರಕರಣ ಮತ್ತೊಬ್ಬ ಆರೋಪಿ ಅಂದರ್”

ಮೈಸೂರು,ಫೆಬ್ರವರಿ,12,2021(www.justkannada.in) : ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.jk

ನಿವೇಶನ ಸಂಬಂಧ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4 ಆರೋಪಿಗಳ ಬಂಧಿಸಿದಂತ್ತಾಗಿದೆ.

ಗೌರಿಶಂಕರ ನಗರ ಸರ್ವೆ ನಂ.101 ನಿವೇಶನ ಸಂಖ್ಯೆ 2 ರ ಜಾಗದ ವಿಚಾರದಲ್ಲಿ ಸೋಮೇಶ್(ಮೀಸೆ ಸ್ವಾಮಿ) ಎಂಬುವನಿಗೂ ಕಿರಣ್ ಮತ್ತು ಕಿರಣ್ ಕಡೆಯವರಿಗೆ ಗಲಾಟೆ ನಡೆದಿತ್ತು.

ಜೋಡಿ ಕೊಲೆ ಸಂಬಂಧ ಮೊದಲಿಗೆ ಮೂವರನ್ನು ಬಂಧಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಮೈಸೂರಿನ ಚಾಮುಂಡಿಬೆಟ್ಟದ ಪಾದದ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗ ನಿವಾಸಿ ಆರೋಪಿ ದಿಲೀಪ್ ನನ್ನು ಇಂದು ಬಂಧಿಸಲಾಗಿದೆ.

ಗೌರಿಶಂಕರ ನಗರದ ಮಧು, ಚಾಮುಂಡಿಬೆಟ್ಟದ ಪಾದ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗ ನಿವಾಸಿ ಮೀಸೆ ಸ್ವಾಮಿ, ವಿದ್ಯಾರಣ್ಯಪುರಂನ ರಘು ಬಂಧಿತ ಆರೋಪಿಗಳಾಗಿದ್ದಾರೆ.Mysore-Couple-Murder-Case-Another-Accused-Detentionಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರದ ಡಿ.ಸಿ.ಪಿ ಡಾ.ಎ.ಎನ್.ಪ್ರಕಾಶ್‍ಗೌಡ ನೇತೃತ್ವದಲ್ಲಿ ಎ.ಸಿ.ಪಿ.ಕೃಷ್ಣರಾಜ ವಿಭಾಗದ ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಲ್.ಶ್ರೀನಿವಾಸ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

key words : Mysore-Couple-Murder-Case-Another-Accused-Detention