ರಾಜ್ಯದ ದಲಿತ ಸಂಸದರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಟ್ವಿಟ್ಟರ್ ನಲ್ಲಿ ವ್ಯಂಗ್ಯ ವಿಚಾರ- ಸಿದ್ದರಾಮಯ್ಯ ವಿರುದ್ದ ವಿ,ಶ್ರೀನಿವಾಸ್ ಪ್ರಸಾದ್ ಏಕವಚನದಲ್ಲೇ ವಾಗ್ದಾಳಿ

ಮೈಸೂರು,ಜೂ,8,2019(www.justkannada.in): ರಾಜ್ಯದ ದಲಿತ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಟ್ವಿಟ್ಟರ್ ನಲ್ಲಿ ವ್ಯಂಗ್ಯ  ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಿ,ಶ್ರೀನಿವಾಸ್ ಪ್ರಸಾದ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಅವನಿಗೆ ಹಂತ ಹಂತದಲ್ಲೂ ಮುಖಭಂಗವಾಗಿದೆ. ಅವನು ನಾಚಿಕೆಗೆಟ್ಟ  ಮನುಷ್ಯ , ಮೈಸೂರು ಜಿಲ್ಲೆಯಲ್ಲಿ ಮುಖ ತೋರಿಸದಂತೆ ಆಗಿದೆ, ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶ್ರೀನಿವಾಸ್ ಪ್ರಸಾದ್,  ಸಂಪುಟ ರಚನೆ ವೇಳೇ ದಲಿತರಿಗೆ ಅನ್ಯವಾಗಿಲ್ಲ. ಸಚಿವ ಸ್ಥಾನ ಸಿಗಲಿದೆ .ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡೋದು ನಮ್ಮ ಗುರಿ, ಮುಂದಿನ ಕ್ಯಾಬಿನೇಟ್ ಎಕ್ಷ್ ಪೆನ್ಸನ್ ನಲ್ಲಿ ದಲಿತರಿಗೆ ಅವಕಾಶ ಸಿಗಲಿದೆ. ರಾಜ್ಯದ ದಲಿತ ಸಂಸದರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ  ಮಾಹಿತಿ ನೀಡಿದರು.

ಸಚಿವ ಸ್ಥಾನ ಸಿಗುವುದರ ಬಗ್ಗೆ ಎರಡನೇ ಮಾತೇಕೆ  ..? ಈ ಬಗ್ಗೆ ಈಗಾಗಲೇ ಬೆಂಗಳೂರಿನಲ್ಲಿ ನೂತನ ಸಂಸದರಿಗೆ  ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ  ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ,  ಮುಂದಿನ ಸಂಪುಟ ವಿಸ್ತರಣೆಯಲ್ಲಿ  ದಲಿತ ಸಮುದಾಯಕ್ಕೆ ಸಚಿವ ಸ್ಥಾನ ಸಿಗಲಿದೆ. ಇಡೀ ರಾಷ್ಟ್ರದಲ್ಲಿ ಈಗಾಗಲೇ 10ಜನ ಎಸ್ಸಿ ಎಸ್ಟಿ ಸಂಸದರಿಗೆ  ಸಚಿವ  ಸ್ಥಾನ ನೀಡಿದ್ದಾರೆ, ಮುಂದೆ ರಾಜ್ಯದಲ್ಲೂ ದಲಿತರಿಗೆ  ಅವಕಾಶ ಸಿಗಲಿದೆ, ಕಾದು ನೋಡೋಣ  ಎಂದರು.

Key words: VSrinivas Prasad, in the singular speech against Siddaramaiah.

#VSrinivasPrasad #singular #speech #Siddaramaiah #mysore