ಅಪ್ಪು ಅಂತ್ಯಸಂಸ್ಕಾರ: ಪರಿಸ್ಥಿತಿ ನಿಭಾಯಿಸಿದ ಪೊಲೀಸ್, ಬಿಬಿಎಂಪಿ ಅಧಿಕಾರಿಗಳಿಗೆ ಹೋಂ ಮಿನಿಸ್ಟರ್ ಧನ್ಯವಾದ

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ನಮ್ಮೆಲ್ಲರ ನೆಚ್ಚಿನ ನಟರೂ, ಕನ್ನಡ ಚಿತ್ರರಂಗದ ಮುಕುಟ ಮಣಿಯೂ ಆಗಿದ್ದ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತವಾಗಿ, ಸಕಲ ಸರಕಾರಿ ಗೌರವಳೊಂದಿಗೆ ನೆರವೇರಿದೆ.

ನೆಚ್ಚಿನ ನಟನ ಅಕಾಲಿಕ ನಿಧನದ ಇಂಥಹ ಒಂದು ದುಃಖದ ಸಂಧರ್ಬದಲ್ಲಿ, ಸಾರ್ವಜನಿಕರು, ಅತ್ಯಂತ, ಶಾಂತಿ ಹಾಗೂ ತಾಳ್ಮೆಯನ್ನು, ಪ್ರದರ್ಶಿಸಿ, ಅಗಲಿದ ಚೈತನ್ಯಕ್ಕೆ, ಲಕ್ಷಾಂತರ ಜನರು, ಗೌರವ ಸಲ್ಲಿಸಿದ್ದಾರೆ.

ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದ, ನಮ್ಮ ಪೊಲೀಸ್, ಬಿ ಬಿ ಎಂ ಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಗೃಹ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.