ಮದುವೆ ಸಂಭ್ರಮದಲ್ಲೂ ಅಪ್ಪುಗೆ ಶ್ರದ್ಧಾಂಜಲಿ… ಮೈಸೂರಿನಲ್ಲಿ ವಧು-ವರ ಪುನೀತ್’ಗೆ ಅಭಿಮಾನ ತೋರಿದ ಬಗೆ ಇದು…

ಮೈಸೂರು, ಅಕ್ಟೋಬರ್ 31, 2021 (www.justkannada.in): ಮಧುಮಗ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದ‌ರು. ಹೀಗಾಗಿ ಅಪ್ಪು ಮೇಲಿನ ಪ್ರೀತಿಯಿಂದ ಮದುವೆ ಮನೆಯಲ್ಲೂ ಶ್ರದ್ಧಾಂಜಲಿ ಸಭೆ ನಡೆಯಿತು.

ಇದು ನಡೆದಿದ್ದು ಮೈಸೂರಿನ ಕನಕ ಭವನದಲ್ಲಿ ನಡೆದ ಮನುಕಿರಣ್ ಮತ್ತು ಲಾವಣ್ಯ ಎಂಬುವವರ ಮದುವೆ ಕಾರ್ಯಕ್ರಮದಲ್ಲಿ.

ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಮೈಸೂರಿನ ಮದುವೆ ಸಂಭ್ರಮದ ನಡುವೆ ಮಂಟಪದಲ್ಲಿಯೇ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮದುಮಕ್ಕಳು ಹಾಗೂ ಮದುವೆಗೆ ಬಂದ ಅತಿಥಿಗಳಿಂದ ಶ್ರದ್ಧಾಂಜಲಿ ಸಲ್ಲಿಸಿ ಅಪ್ಪು ಸ್ಮರಿಸಿದರು. ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.