ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಸಂಡೇ ಲಾಕ್ ಡೌನ್ , ನೈಟ್ ಕರ್ಫ್ಯೂ ಇರಲ್ಲ- ಡಿಸಿಪಿ ಡಾ. ಎ. ಎನ್. ಪ್ರಕಾಶ್ ಗೌಡ ಸ್ಪಷ್ಟನೆ..

ಮೈಸೂರು,ಜು,31,2020(www.justkannada.in): ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಸಂಡೇ ಲಾಕ್ ಡೌನ್ ಇರುವುದಿಲ್ಲ. ಜೊತೆಗೆ ನೈಟ್ ಕರ್ಫ್ಯೂವನ್ನೂ ಕೂಡ ಹಿಂತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಡಾ. ಎ. ಎನ್. ಪ್ರಕಾಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾತನಾಡಿದ ಡಿಸಿಪಿ ಎ. ಎನ್. ಪ್ರಕಾಶ್ ಗೌಡ, ಮೈಸೂರಿನಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಲಾಕ್ ಡೌನ್ ನಿಯಮಗಳನ್ನು ಜಾರಿಗೆ ತರಲಾಗುವುದು. ಇನ್ನು ಮುಂಜಾಗ್ರತಾ ಕ್ರಮವಾಗಿ ಬಕ್ರೀದ್ ಹಬ್ಬಕ್ಕೆ ಸರ್ಕಾರದ ಆದೇಶಗಳು ಪಾಲನೆಯಾಗಲಿವೆ. ಮಸೀದಿಯಲ್ಲಿ 50 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲವೆಂದು ಸೂಚನೆ ನೀಡಲಾಗಿದೆ. ಈ ಕುರಿತು ಮೈಸೂರಿನಲ್ಲಿರುವ ಎಲ್ಲಾ ಮೌಲ್ವಿಗಳು ಹಾಗೂ ಧಾರ್ಮಿಕ ಮುಖಂಡರ ಜೊತೆ ಮಾತನಾಡಿದ್ದೇವೆ. ಅವರೂ ಕೂಡ ಅದಕ್ಕೆ ಸಂಪೂರ್ಣ ಸಹಕಾರ ಹಾಗೂ ಒಪ್ಪಿಗೆ ನೀಡಿದ್ದಾರೆ. ನಿರ್ದಿಷ್ಟ ಸಮಯದಲ್ಲಿ 50ಕ್ಕೂ ಹೆಚ್ಚು ಜನ ಸೇರದಂತೆ ಮಸೀದಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.no Sunday –Lockdown- Night Curfew – Mysore-DCP- Dr. A. N. Prakash Gowda

ನಮ್ಮ ಪೊಲೀಸ್ ಸಿಬ್ಬಂದಿಗೂ ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಸರ್ಕಾರ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದ ಡಿಸಿಪಿ ಡಾ. ಎ. ಎನ್. ಪ್ರಕಾಶ್ ಗೌಡ, ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಸಂಡೇ ಲಾಕ್ ಡೌನ್ ಇರುವುದಿಲ್ಲ. ಜೊತೆಗೆ ನೈಟ್ ಕರ್ಫ್ಯೂ ವನ್ನೂ ಕೂಡ ಹಿಂತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Key words: no Sunday –Lockdown- Night Curfew – Mysore-DCP- Dr. A. N. Prakash Gowda