ವಿಷ್ಣು ಸ್ಮಾರಕ : ಸಿಎಂ ಬಿ.ಎಸ್.ಯಡಿಯೂರಪ್ಪ ಆನ್ ಲೈನ್ ಮೂಲಕ ಚಾಲನೆ

ಮೈಸೂರು,ಸೆಪ್ಟೆಂಬರ್,15,2020(www.justkannada.in) :  ವಿಷ್ಣು ಸ್ಮಾರಕ ಶಿಲಾನ್ಯಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್ ಲೈನ್ ಮೂಲಕ ಮಂಗಳವಾರ ಚಾಲನೆ ನೀಡಿದರು.

 

Vishnu-Memorial-Driving-through-online

ಕನ್ನಡದ ಮೇರುನಟ ದಿ.ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಎಚ್.ಡಿ.ಕೋಟೆಯ ರಸ್ತೆಯಲ್ಲಿರುವ ಉದ್ಬೂರು ಗೇಟ್ ಬಳಿಯ ಹಾಲಾಳುವಿನ 5 ಎಕರೆ ಜಾಗದಲ್ಲಿ ನಿರ್ಮಿಸಲು ಸಿದ್ಧತೆ.

ವಿಷ್ಣುವರ್ಧನ್ ಸ್ಮಾರಕ ಶಿಲಾನ್ಯಾಸಕ್ಕೂ ಮುನ್ನ ಪೂಜಾ ವಿಧಿವಿಧಾನ ನಡೆಸಲಾಯಿತು. ಈ ಸಂದರ್ಭ ಡಾ.ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್, ಕೀರ್ತಿ ವಿಷ್ಣುವರ್ಧನ್ ಸೇರಿದಂತೆ ಇತರರು ಭಾಗಿ.

11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ

ಸರಕಾರವು ಅಂದಾಜು 11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಿದೆ. ಬೆಂಗಳೂರಿನ ಡಿಸೈನ್ ಸ್ಟುಡಿಯೊ ವಾಸ್ತು ಶಿಲ್ಪ ನಕ್ಷೆ ತಯಾರಿ ಮಾಡಿದೆ. 35.40 ಮೀಟರ್ ವೃತ್ತಾಕಾರದಲ್ಲಿ ಸ್ಮಾರಕ ಹಾಗೂ ಗ್ಯಾಲರಿ ನಿರ್ಮಾಣ‌. ಸ್ಮಾರಕ ಮುಂಭಾಗ ನೀರಿನ ಚಿಲುಮೆ. ಒಟ್ಟು 1454.70 ಚ.ಮೀಟರ್ ವ್ಯಾಪ್ತಿಯಲ್ಲಿ ಸ್ಮಾರಕ ಕಟ್ಟಡ ನಿರ್ಮಾಣವಾಗಲಿದೆ

ಸ್ಮಾರಕದ ಆವರಣದಲ್ಲಿ ಏನೇನಿರುತ್ತೆ?

ಸ್ಮಾರಕದ ಆವರಣದಲ್ಲಿ ಚಿತ್ರಗ್ಯಾಲರಿ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿ, ಡೈರೆಕ್ಟರ್ ಕ್ಯಾಬಿನ್, ಶೌಚಾಲಯ ಆಫೀಸ್ ಸ್ಟಾಫ್ ಕೊಠಡಿ ನಿರ್ಮಾಣಕ್ಕೆ ಫ್ಲಾನ್ ಸಿದ್ದಪಡಿಸಿದ್ದು, ಎಂ 9 ಡಿಸೈನ್ ಸ್ಟುಡಿಯೊ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ.

key words : Vishnu-Memorial-Driving-through-online