‘ವಿಕ್ರಾಂತ್ ರೋಣ’ಗೆ ಇಂಟರ್ ನ್ಯಾಷನಲ್ ಮಾರ್ಕೆಟ್’ನಲ್ಲೂ ಡಿಮ್ಯಾಂಡ್

Promotion

ಬೆಂಗಳೂರು, ಮೇ 11, 2022 (www.justkannada.in): ‘ಕೆಜಿಎಫ್ 2’ ಸಿನಿಮಾ ಬಳಿಕ ಕಿಚ್ಚ ಸುದೀಪ್ ಸಿನಿಮಾ ‘ವಿಕ್ರಾಂತ್ ರೋಣ’ ಅಖಾಡಕ್ಕೆ ಇಳಿದಿದೆ.

ಕರ್ನಾಟಕ ಅಷ್ಟೇ ಅಲ್ಲ. ದೇಶ-ವಿದೇಶದಿಂದ ‘ವಿಕ್ರಾಂತ್ ರೋಣ’ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ 3ಡಿಯಲ್ಲಿ ಬರುತ್ತಿರುವ ಸಿನಿಮಾ ಆಗಿರುವುದರಿಂದ ‘ವಿಕ್ರಾಂತ್ ರೋಣ’ ಸಿನಿಪ್ರಿಯರ ಗಮನ ಸೆಳೆದಿದೆ.

‘ವಿಕ್ರಾಂತ್ ರೋಣ’ ಕರ್ನಾಟಕ ಅಷ್ಟೇ ಅಲ್ಲ. ವಿದೇಶದ ಮಾರುಕಟ್ಟೆಯಲ್ಲೂ ಭಾರೀ ಬೇಡಿಕೆ ಇದ್ದೂ, ಈಗಾಗಲೇ ಚಿತ್ರತಂಡ ಬ್ಯುಸಿನೆಸ್ ಕುದುರಿಸಿದೆ.

. ಮೂಲಗಳ ಪ್ರಕಾರ, ಓವರ್‌ಸೀಸ್ ಮಾರುಕಟ್ಟೆಯಲ್ಲಿ ‘ವಿಕ್ರಾಂತ್ ರೋಣ’ ದಾಖಲೆಯ ಮೊತ್ತಕ್ಕೆ ವ್ಯಾಪಾರವಾಗಿದ್ದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಮೊದಲ ಕನ್ನಡ ಸಿನಿಮಾ ಆಗಿದೆ.