ರೈತರನ್ನು ಬೀದಿಗೆ ತಳ್ಳಿ ರೈತ ದಿನಾಚರಣೆ ಮಾಡುವುದು ಶೋಭೆ ತರುವುದಿಲ್ಲ :ರೈತ ಮುಖಂಡ ಕುರುಬೂರು ಶಾಂತಕುಮಾರ್

ಬೆಂಗಳೂರು,ಡಿಸೆಂಬರ್,24,2020(www.justkannada.in): ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯನ್ನು ದಿಕ್ಕು ತಪ್ಪಿಸಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ರೈತರನ್ನು ಬೀದಿಗೆ ತಳ್ಳಿ ರೈತ ದಿನಾಚರಣೆ ಮಾಡುವುದು ಕೇಂದ್ರ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashok

ದೆಹಲಿ ರೈತರ ಹೋರಾಟ ಬೆಂಬಲಿಸಿ 9ನೇ ದಿನದಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ನೂರಾರು ರೈತರು ಅರಬೆತ್ತಲೆ ಮಾಡಿ ಬಾರುಕೋಲು ಬೀಸುವ ಮೂಲಕ, ಸರ್ಕಾರಕ್ಕೆ ಎಚ್ಚರಿಸಿ ಧರಣಿ ನಡೆಸಿದರು.

ಈ ಸಂದರ್ಭ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸುಗ್ರಿವಾಜ್ಞೆ 3 ಕಾಯ್ದೆಗಳಿಂದ ರೈತರಿಗೆ ಮಾರಕ ಪರಿಣಾಮ ಎಂದು ಬಿಜೆಪಿ ಸಹ ಸಂಘಟನೆಯ ಭಾರತೀಯ ಕಿಸಾನ್ ಸಂಘ ಹಾಗೂ ಸ್ವದೇಶಿ ಜಾಗರಣ ಮಂಚ್ ಬಹಿರಂಗವಾಗಿ ಹೋರಾಟಕ್ಕಿಳಿದಿದೆ. ಆದರೂ. ಇದನ್ನು ಗಮನಿಸದೆ ಕೇಂದ್ರದ ಮಂತ್ರಿಗಳು ಕಾಯ್ದೆಗಳು ರೈತರಿಗೆ ಹೆಚ್ಚಿನ ಅನುಕೂಲ ಎಂದು ಬಿಂಬಿಸುತ್ತಿವೆ ಎಂದು ಕಿಡಿಕಾರಿದರು.

Farmers-Head-down-street-Making-Farmer's-Day- Don't-bother-Farmer-leader-Kuruburu Shanthakumar

ಕಾರ್ಪೊರೇಟ್ ಕಂಪನಿಗಳ ಮರ್ಜಿಯಲ್ಲಿ ಕಾನೂನುಗಳು ರಚನೆಯಾಗುತ್ತಿವೆ. ಸರ್ಕಾರಗಳು ಜಾರಿ ಮಾಡುವ ಕೆಲಸ ಮಾತ್ರ ಮಾಡುತ್ತಿದೆ. ದುಡಿಯುವ ವರ್ಗ ಕೂಲಿ ಕಾರ್ಮಿಕರು ರೈತರು, ಕಾರ್ಖಾನೆ ಕಾರ್ಮಿಕರುಗಳನ್ನು ಕಂಪನಿಗಳ ಗುಲಾಮರಾಗಿ ಮಾಡಲು ಇಂಥ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

ಪ್ರಧಾನಿಯವರು ಕಿಸಾನ್ ಸಮ್ಮಾನ್ ಯೋಜನೆ ಹಣವನ್ನು ಬಜೆಟ್ ನಲ್ಲಿ ಘೋಷಿಸಿ ಮೂರು ಬಾರಿ ಪ್ರಚಾರ ಪಡೆದಿದ್ದಾರೆ . ಈಗ ರೈತರ ಕಣ್ಣಿಗೆ ಮಣ್ಣೆರಚಲು ಮುಂದಾಗುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದರೆ ಹೋರಾಟ ನಿರತ ರೈತ ಮುಖಂಡರ ಜೊತೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಲಿ ಎಂದರು.

ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ 3500 ಕೋಟಿ ಬಿಡುಗಡೆ ಎಂಬುದು ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಸಹಾಯಕವಾಗಿದೆ ಹೊರತು ರೈತರಿಗಲ್ಲ. ಇದನ್ನು ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಎಂದು ಬಿಂಬಿಸಲಾಗುತ್ತಿದೆ. ಇದು ರೈತರ ಸರ್ಕಾರ ಎಂದು ಹೇಳುತ್ತಿದ್ದಾರೆ. 30 ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದರು ಗಂಭೀರವಾಗಿ ಸರ್ಕಾರ ಚಿಂತಿಸುತ್ತಿಲ್ಲ, ಇದು ರೈತರ ಬಲಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹೊಡಿರಪ್ಪ ಹೊಡೆಯಿರಿ, ಸರ್ಕಾರಕ್ಕೆ  ಬಾರುಕೋಲುನಿಂದ ಹೊಡೆಯಿರಿ,ರೈತರನ್ನು ಬೆತ್ತಲೆ ಮಾಡಿದ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

Farmers-Head-down-street-Making-Farmer's-Day- Don't-bother-Farmer-leader-Kuruburu Shanthakumar

ಪ್ರತಿಭಟನೆಯಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ವಕೀಲರ ಸಂಘ, ಅಖಂಡ ಕರ್ನಾಟಕ ರೈತ ಸಂಘದ ಸುಧೀರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರಣ್ಣಗೌಡ, ಗದಗ್, ಶಿವಮೊಗ್ಗದ ದೇವಕುಮಾರ್, ಸಿಐಟಿಯು ಕಾರ್ಯದರ್ಶಿ ಷಿರಿಮನೆ ನಾಗರಾಜ್, ಹತ್ತಳ್ಳಿ ದೇವರಾಜ್, ಪ್ರಾಂತ ರೈತ ಸಂಘದ ಯಶವಂತ, ರೈತ ಮುಖಂಡ ಈರಣ್ಣ ಕಿರಗಸೂರು ಶಂಕರ್ ಭಾಗ್ಯರಾಜ್ ಎಂ.ಬಿ.ಚೇತನ್, ಬರಡನಪುರ ನಾಗರಾಜ್ ಇತರರು ಭಾಗವಹಿಸಿದ್ದರು.

key words : Farmers-Head-down-street-Making-Farmer’s-Day- Don’t-bother-Farmer-leader-Kuruburu Shanthakumar