ಇಂದಿನಿಂದ ಸಂಸತ್ ವಿಶೇಷ ಅಧಿವೇಶನ: 5 ಬಿಲ್ ಮಂಡಿಸಲು ಬಿಜೆಪಿ ತಯಾರಿ

ಬೆಂಗಳೂರು, ಸೆಪ್ಟೆಂಬರ್ 18, 2023 (www.justkannada.in): ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು,​ ಕಲಾಪದಲ್ಲಿ ಬಿಜೆಪಿ ಪ್ರಮುಖವಾಗಿ 5 ಬಿಲ್​​ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಿಢೀರ್​ ಅಂತ ವಿಶೇಷ ಅಧಿವೇಶನ ಏರ್ಪಡಿಸಿದ್ದು, ಇಂದಿನಿಂದ ಸೆಪ್ಟೆಂಬರ್​ 22ರವರೆಗೆ ಸಂಸತ್​ ಕಲಾಪ ನಡೆಯಲಿದೆ.

ಇಂದು ಹಳೇ ಸಂಸತ್​ ಕಟ್ಟಡದಲ್ಲಿ ಅಧಿವೇಶನ ನಡೆಯಲಿದ್ದು, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.

ಗೌರಿ ಗಣೇಶ ಹಬ್ಬದ ದಿನವೇ ವಿಶೇಷ ಕಲಾಪ ಕರೆದಿದ್ದು ಸರಿಯಲ್ಲ ಅಂತಿದ್ದರು. ಅಪಸ್ವರ ಎತ್ತಿದವರು ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಖರ್ಗೆ, ರಾಹುಲ್​ಗಾಂಧಿ ಸೇರಿ ಕಾಂಗ್ರೆಸ್​​ನ ಪ್ರಮುಖ ನಾಯಕರು ಗೈರಾಗಿದ್ದರು.

ನೂತನ ಸಂಸತ್​ ಭವನಕ್ಕೆ ಮಂಗಳವಾರದಿಂದ ಕಲಾಪ ಶಿಫ್ಟ್​ ಆಗಲಿದೆ. ಹೀಗಾಗಿ ಸೆಂಟ್ರಲ್​ ವಿಸ್ತಾ ಕಟ್ಟಡದ ಮೇಲೆ ಉಪರಾಷ್ಟ್ರಪತಿ ಹಾಗು ರಾಜ್ಯಸಭೆ ಪೀಠಾಧ್ಯಕ್ಷ ಜಗದೀಪ್​ ಧನ್ಕರ್​, ಲೋಕಸಭೆ ಸ್ಪೀಕರ್​ ಓಂಬಿರ್ಲಾ ಪ್ರಪ್ರಥಮವಾಗಿ ತಿರಂಗಧ್ವಜ ಹಾರಿಸಿದ್ದರು.