ರಾಜ್ಯದಲ್ಲಿರುವುದು ಎಟಿಎಂ, ಕಮಿಷನ್​ ಸರ್ಕಾರ: ಬಿಜೆಪಿ ಎಂಎಲ್ ಸಿ  ರವಿಕುಮಾರ್ ವಾಗ್ದಾಳಿ.

ಬೆಂಗಳೂರು,ಆಗಸ್ಟ್,18,2023(www.justkannada.in): ರಾಜ್ಯದಲ್ಲಿರುವುದು ಕಮಿಷನ್​, ಎಟಿಎಂ ಸರ್ಕಾರ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಎಂಎಲ್ ಸಿ ರವಿಕುಮಾರ್, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗುತ್ತಿಗೆದಾರರನ್ನು ಹೆದರಿಸಿ ವ್ಯವಹಾರ ಮಾಡುತ್ತಿದ್ದಾರೆ. ಇದು ನಾಡಿನ ಸಂಸ್ಕೃತಿ, ಶಿಕ್ಷಣ, ನೆಲ ಜಲ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ವಲಸಿಗ ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ರವಿ ಕುಮಾರ್, ಈ ವಿಷಯದ ಬಗ್ಗೆ ನಾವೇನೂ ಚರ್ಚೆ ಮಾಡಲ್ಲ ಎಂದರು.

Key words: ATM- state- Commission -congress Govt-BJP- MLC Ravikumar