ರೈತರಿಗೆ ನೀರಿಲ್ಲ, ಜಲಾಶಯ ಖಾಲಿ: ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರು- ಸಿ.ಟಿ.ರವಿ ಟೀಕೆ.

ಮೈಸೂರು,ಆಗಸ್ಟ್,18,2023(www.justkannada.in): ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಬಿಜೆಪಿ ಅಧಿಕಾರ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ. ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ. ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ. ಶೂನ್ಯ ಬಿಲ್ ಅಂತರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ. ಇಂತಹ‌ ದುರ್ದೆಸೆ ಇರುವ ಸಂದರ್ಭದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರಾ ಎಂದು ಟಾಂಗ್ ನೀಡಿದರು.

ಒಂದು ವೇಳೆ ಹೋಗುವವರನ್ನು ರಾಜಕೀಯ ಜಾಣ್ಮೆ ಇರುವವರು, ಬುದ್ದಿವಂತರು ಎಂದು ಹೇಳಲ್ಲ. ಹೋಗುವವರಿಗೆ ದೂರಾಲೋಚನೆ ಇದೆ‌ ಎಂದು ಹೇಳಲಾಗಲ್ಲ. ಸರ್ಕಾರ ಬಂದಾಗಿನಿಂದ ಕಾಂಗ್ರೆಸ್ ಹಿರಿಯ ಶಾಸಕರಿಗೆ ಸಮಾಧಾನ ಇಲ್ಲ. ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತದೆ ಎಂದು ಸಿಟಿ ರವಿ ಪ್ರಶ್ನಿಸಿದರು.

ಶಾಸಕ ಎಸ್ ಟಿ ಸೋಮಶೇಖರ್ ಜೊತೆ ನಾನು ಮಾತನಾಡುತ್ತೇನೆ.   ಅವರ ಭಾವನೆ ಏನಿದೆ ಎಂದು ಚರ್ಚಿಸಿ ಬಳಿಕ ಉಳಿದವರ ಜೊತೆ ಮಾತನಾಡುತ್ತೇನೆ . ಸೋತಿರುವುದಕ್ಕೆ ತಪ್ಪು ನಮ್ಮದು ಎಂದು ಹೇಳಿದ್ದೇವೆ. ಸೋಮಶೇಖರ್ ಜೊತೆ ಕೂತು ಮಾತನಾಡಿದ ಬಳಿಕ ಎಲ್ಲವೂ ಸರಿಯೋಗುತ್ತೆ ಎಂದು ಸಿಟಿ ರವಿ ಹೇಳಿದರು.

Key words: Congress -came – power- state –started- suffering-C. T. Ravi