ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳವನ್ನು ಘೋಷಣೆ ?

ಬೆಂಗಳೂರು, ಸೆಪ್ಟೆಂಬರ್ 18, 2023 (www.justkannada.in): ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ.

ಈ ತಿಂಗಳ ಅಂತ್ಯದೊಳಗೆ ಅಥವಾ ನವರಾತ್ರಿಯ ಮೊದಲು ಡಿಎ ಹೆಚ್ಚಳವನ್ನು ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಜುಲೈ 1, 2023 ರಿಂದ ಜಾರಿಗೆ ಬರಲಿರುವ ಡಿಎ ಹೆಚ್ಚಳವು ಶೇಕಡಾ 3 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಳದ ನಂತರ ತುಟ್ಟಿ ಭತ್ಯೆ ಶೇ.45ಕ್ಕೆ ತಲುಪಲಿದೆ.

ಮೂರು ಪ್ರತಿಶತದಷ್ಟು ಡಿಎಸ್ಎ ಹೆಚ್ಚಳವನ್ನು ಘೋಷಿಸಿದರೆ, ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಶೀಘ್ರವೇ ಗುಡ್ ನ್ಯೂಸ್ ನೀಡಲಿದೆ.