ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ : ಘಟನೆ ಬಗ್ಗೆ ವಿವರ ಬಿಚ್ಚಿಟ್ಟ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್..

ಹೈದರಾಬಾದ್,ಡಿ,6,2019(www.justkannada.in):  ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನ ಎನ್ ಕೌಂಟರ್ ಮಾಡಿದ ಬಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್  ವಿವರವಾಗಿ ತಿಳಿಸಿದ್ದಾರೆ.

ಇಂದು ಘಟನಾಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನವರ್, ಮುಂಜಾನೆ 5.30ರಿಂದ 6.15ರ ವೇಳೆಗೆ ಆರೋಪಿಗಳ ಎನ್ ಕೌಂಟರ್ ನಡೆದಿದೆ.  ಮುಂಜಾನೆ ಆರೋಪಿಗಳನ್ನ ಸ್ಥಳ ಪರಿಶೀಲನೆಗೆಂದು ಕರೆದುಕೊಂಡು ಹೋಗಲಾಗಿತ್ತು.  ಈ ವೇಳೆ ಆರೋಪಿಗಳ ಬಳಿ ಮಾಹಿತಿ ಪಡೆಯುತ್ತಿದ್ದಾಗ ಆರಿಫ್ ಮತ್ತು ಚೆನ್ನಕೇಶವಲು ಪೊಲೀಸರ ಬಳಿ ಇದ್ದ ಗನ್ ಕಸಿಯಲು ಯತ್ನಿಸಿದ್ದರು. ಮತ್ತು ಇನ್ನುಳಿದ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದರು. ಈ ಸಮಯದಲ್ಲಿ ಆತ್ಮ ರಕ್ಷಣೆಗಾಗಿ 10 ಪೊಲೀಸರ ತಂಡದಿಂದ ಗುಂಡು ಹಾರಿಸಿಲಾಯಿತು ಎಂದು ವಿವರಿಸಿದರು.

 ಪ್ರಕರಣ ಸಂಬಂಧ ಮೊದಲ ದಿನದ ವಿಚಾರಣೆ ವೇಳೆ ಮಹತ್ವದ ಸಾಕ್ಷಿ ಸಿಕ್ಕಿತ್ತು. ಘಟನಾ ಸ್ಥಳದಲ್ಲಿ ಆರೋಪಿಗಳು ದಿಶಾ ಬಳಸುತ್ತಿದ್ದ ಮೊಬೈಲ್ ಪವರಬ್ಯಾಂಕ್ ಮತ್ತು ವಾಚ್ ಮುಚ್ಚಿಟ್ಟಿದ್ದರು. ಆರೋಪಿಗಳ ಮಾಹಿತಿ ಮೇರೆಗೆ ಅವುಗಳನ್ನ ವಶಕ್ಕೆ ಪಡೆಯಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಕರ್ನಾಟಕ ಆಂಧ್ರ ತೆಲಂಗಾಣದಲ್ಲೂ ಇಂತಹ ಕೃತ್ಯವೆಸಗಿರುವ ಶಂಕೆ ಇದೆ.  ಹೀಗಾಗಿ ತನಿಖೆ ನಡೆಸಲಾಗುತ್ತಿದೆ

Key words: veterinary doctor- rape-case –Cybarabad -Police Commissioner -Vishwanath Sajjanar- en Counter – accused