ಜಿಲ್ಲಾ ನ್ಯಾಯಾಧೀಶರ ಮತ್ತು ಸಹಾಯಕ ಅಭಿಯೋಜಕರ ಹುದ್ದೆಗೆ ಪರೀಕ್ಷೆ: ಉಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ.

ಮೈಸೂರು,ಮಾರ್ಚ್,18,2022(www.justkannada.in): ಮೈಸೂರು ವಕೀಲರ ಸಂಘ, ಜೆ ಎಸ್ ಎಸ್ ಕಾನೂನು ಕಾಲೇಜು, ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ‌ ಆಯೋಜಿಸಲಾಗಿರುವ ಜಿಲ್ಲಾ ನ್ಯಾಯಾಧೀಶರ ಹುದ್ದೆ ಸಹಾಯಕ ಅಭಿಯೋಜಕರ ಹುದ್ದೆಗೆ ಪರೀಕ್ಷೆಯ ಪರೀಕ್ಷಾರ್ಥಿಗಳಿಗಾಗಿ ಉಚಿತ ತರಬೇತಿ ಕಾರ್ಯಾಗಾರವನ್ನ ಉದ್ಘಾಟಿಸಲಾಯಿತು.

ಲಾ ಗೈಡ್ ಕಾನೂನು ಪತ್ರಿಕೆ ಸಂಪಾದಕ ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ 10 ದಿನಗಳ ಕಾಲ‌ ಕಾರ್ಯಾಗಾರ ನಡೆಯಲಿದ್ದು ಮೈಸೂರಿನ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ‌ ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಎಸ್ ಪಿ ಶಂಕರ್,  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್ ಉಮೇಶ್, ಜೆಎಸ್‌ಎಸ್ ಕಾನೂನು ಕಾಲೇಜು ಮುಖ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಸುರೇಶ್ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಉಪಾಧ್ಯಕ್ಷ ಚಂದ್ರಮೌಳಿ ಅವರಿಗೆ ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ‌ ಅಧ್ಯಕ್ಷ ಜಿ ವಿ ರಾಮಮೂರ್ತಿ, ಹಿರಿಯ ವಕೀಲರಾದ ಎಸ್ ಲೋಕೇಶ್, ಗಿರಿಜೇಶ್, ರವಿಕಾಂತ್, ನಾಗರಾಜ್, ಶಿವಕುಮಾರ್ ರಾಜೇಶ್ ಸೇರಿ ಹಲವರು ಭಾಗಿಯಾಗಿದ್ದರು.

Key words: training-workshop- Law Guide