ಮೈಸೂರು ವಿವಿಯಲ್ಲೇ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ- ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಮಾರ್ಚ್,18,2022(www.justkannada.in):  ರಾಜ್ಯದಲ್ಲಿ ಬೇರೆ ವಿವಿಗಳಿಗೆ ಹೋಲಿಸಿದರೆ ಮೈಸೂರು ವಿವಿಯಲ್ಲೇ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಇಂಟರ್ ನ್ಯಾಷನಲ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ‘‘ಓರಿಯೆಂಟೇಷನ್ ಪ್ರೋಗ್ರಾಮ್ ಅನ್ನು ಉದ್ಘಾಟಿಸಿದರು ಹೇಳಿದಿಷ್ಟು…

ಕಳೆದ ಎರಡು ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಿರಲ್ಲ. ಆದರೆ, ಈ ವರ್ಷ ಕೊರೊನಾ ಕ್ಷೀಣಿಸಿರುವ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದು ಸಂತಸದ ವಿಷಯ. ಈ ಬಾರಿ 148 ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದಿಂದಲೇ 92 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇದು ಇತರ ವಿವಿಗಳಿಗೆ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು,’’ ಎಂದರು.

ಪ್ರತಿಬಾರಿ ವಿದೇಶಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ಫಾರ್ಮಸಿ ಕಾಲೇಜು ಯಾವಾಗ ಆರಂಭ ಮಾಡುತ್ತೀರಾ ಎಂದು ಕೇಳುತ್ತಿದ್ದರು. ಸದ್ಯ ಎಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದ್ದು, ಶೀಘ್ರವೇ ಫಾರ್ಮಸಿ ಕಾಲೇಜನ್ನು ಪ್ರಾರಂಭಿಸಲಾಗುವುದು. ಸ್ವತಃ ದೇಶ ಬಿಟ್ಟು ಸಾಕಷ್ಟು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಆಗಮಿಸುತ್ತಾರೆ. ನಿಮ್ಮ ಶಿಕ್ಷಣ ಎಲ್ಲಾ ಮುಗಿದು ನಿಮ್ಮ ದೇಶಕ್ಕೆ ಹೋಗುವವರೆಗೂ ನಿಮ್ಮ ಕಾಳಜಿ ನಾವು ಮಾಡುತ್ತೇವೆ. ಗುರಿ ಅಚಲವಾಗಿರಲಿ. ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದೇ ವೇಳೆ ಇಂಟರ್ ನ್ಯಾಷನಲ್ ಸ್ಟುಡೆಂಟ್ ಅಡ್ವೈಸರಿ ಬುಕ್ ಬಿಡುಗಡೆ ಮಾಡಲಾಯಿತು.

ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ದನ್ ಮಾತನಾಡಿ, ಒಟ್ಟು 38 ದೇಶದಿಂದ ಆಗಮಿಸುವ ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ಓದುತ್ತಿದ್ದಾರೆ. ಕೋವಿಡ್ ಕಾರಣದಿಂದ ಪ್ರವೇಶ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ವಿದೇಶಿ ವಿದ್ಯಾರ್ಥಿಗಳ ಕಲರವ ಕಂಡು ಖುಷಿಯಾಗುತ್ತಿದೆ, ಕೊರೊನಾದಿಂದ ಓರಿಯೆಂಟೇಷನ್ ‌ಕಾರ್ಯಕ್ರಮ ಮಾಡಲು ಆಗಿರಲಿಲ್ಲ. ಆದರೆ, ಬೆಂಗಳೂರಿನಲ್ಲಿ ಮಾಡಲಾಗಿತ್ತು ಎಂದರು.

ಐಸಿಸಿಆರ್ ಮಾಜಿ ಪ್ರಾದೇಶಿಕ ನಿರ್ದೇಶಕ ಪಿ. ವೇಣುಗೋಪಾಲ್, ಐಸಿಸಿಆರ್ ಪ್ರಾದೇಶಿಕ ಅಧಿಕಾರಿ ಸುದರ್ಶನ್ ಶೆಟ್ಟಿ, ರಾಣಿ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಮುಖ್ಯಸ್ಥ ಪ್ರೊ. ಡಿ.ಆನಂದ್, ಮೈಸೂರು ಚಾಪ್ಟರ್ ಅಧ್ಯಕ್ಷ ಸೈರೋಸ್ ಝಬೊಲಿ ಸೇರಿದಂತೆ ಇತರರು ಇದ್ದರು.

Key words: mysore-university-VC-Hemanth kumar

ENGLISH SUMMARY…

UoM has more number of foreign students: Prof. G. Hemanth Kumar
Mysuru, March 18, 2022 (www.justkannada.in): “Compared to any other university in the State, there is more number of foreign students in the University of Mysore,” observed Prof. G. Hemanth Kumar, Vice-Chancellor, University of Mysore.
He participated in the one-day orientation program organized by the International Centre, held at the Rani Bahaddur auditorium in Manasa Gangotri campus today. In his address, he said, “the number of enrolment of foreign students in the University of Mysore in the last two years
was less due to the COVID-19 Pandemic. But this year their numbers have increased, which is indeed happy to know. About 148 foreigners, including 92 from Afghanistan, have enrolled this year for various courses. This number is more compared to any other university.”
“Every time foreign students used to ask whether the University of Mysore would start engineering and pharmacy courses. This year Engineering College has been commenced, and Pharmacy college will follow soon. Students from other countries come to Mysuru to study by leaving their own country. Hence, we assure to protect you and take concern about you till you are here. Have an aim and develop required skills,” he advised. The International Student Advisory Book was released on the occasion.
ICCR former Regional Director P. Venugopal, ICCR Regional Officer Sudarshan Shetty, Rani Bahaddur Institute of Management Chief Prof. D. Anand, Mysuru Chapter President Syros Zaboli, and others were present.
Keywords: University of Mysore/ International Center/ foreign students