ವಿಶ್ವಬ್ಯಾಂಕ್ ಸಹಕಾರದಿಂದ ಮೂರು ವರ್ಷಗಳಲ್ಲಿ ಪಿಎಚ್ ಸಿಗಳ ನಿರ್ಮಾಣ : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ನವೆಂಬರ್,13,2020(www.justkannada.in) ; ರಾಜ್ಯದಲ್ಲಿ 2,300 ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕೆಂಬ ನಿಯಮವಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಈ ನಿಯಮದಂತೆ ಆಸ್ಪತ್ರೆ ಇಲ್ಲ. ವಿಶ್ವಬ್ಯಾಂಕ್ ಸಹಕಾರದಿಂದ ಮೂರು ವರ್ಷಗಳಲ್ಲಿ ಪಿಎಚ್ ಸಿಗಳನ್ನು ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

kannada-journalist-media-fourth-estate-under-loss

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡುವ ಜೊತೆಗೆ ವಿಶ್ವಬ್ಯಾಂಕ್ ನೆರವಿನೊಂದಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಪೂರಕವಾಗಿ ನೀತಿ, ನಿಯಮಗಳಲ್ಲಿ ಬದಲಾವಣೆ ತರಲಾಗುವುದು ಎಂದರು.

ಗುಣಮಟ್ಟದಲ್ಲಿ ರಾಜಿಯಾಗದಂತೆ ಆಸ್ಪತ್ರೆಗಳಲ್ಲಿ ಕ್ರಮ

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭವಾಗಿ ದೊಡ್ಡ ಆಸ್ಪತ್ರೆಗಳವರೆಗೂ ಗುಣಮಟ್ಟದಲ್ಲಿ ರಾಜಿಯಾಗದಂತೆ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ಸಮಗ್ರವಾದ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಸೇವೆ ಸಲ್ಲಿಸುವ ಪ್ರದೇಶದ ಆಧಾರದಲ್ಲಿ ಬಡ್ತಿ, ವೇತನ

ಕೆಲ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಆರೋಗ್ಯ ಸಿಬ್ಬಂದಿ ಸೇವೆ ಸಲ್ಲಿಸುವ ಪ್ರದೇಶದ ಆಧಾರದಲ್ಲಿ ಬಡ್ತಿ, ವೇತನ, ಮಕ್ಕಳಿಗೆ ಶಿಕ್ಷಣ ನೀಡುವ ಅಂಶಗಳನ್ನು ಈ ಹೊಸ ನೀತಿಯಲ್ಲಿ ಸೇರಿಸಲಾಗುವುದು ಎಂದು ವಿವರಿಸಿದರು.

ವೈದ್ಯರ ನೇಮಕ ಪ್ರಕ್ರಿಯೆ ಆರಂಭ

1,250 ಎಂಬಿಬಿಎಸ್ ವೈದ್ಯರು, 950 ತಜ್ಞರು, 150 ದಂತ ವೈದ್ಯರು ಸೇರಿ 2,500 ವೈದ್ಯರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ 1,500 ಹಿರಿಯ ರೆಸಿಡೆಂಟ್ ವೈದ್ಯರನ್ನು ನೇಮಿಸಲಾಗುವುದು. ಡಿಸೆಂಬರ್ ಅಥವಾ ಜನವರಿ ವೇಳೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ ಹುದ್ದೆಗಳು ಭರ್ತಿಯಾಗಲಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಉದ್ದೇಶವಿದೆ

ಅರೆ ವೈದ್ಯಕೀಯ, ನರ್ಸಿಂಗ್ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಉದ್ದೇಶವಿದ್ದು, ಅದಕ್ಕೆ ತಕ್ಕಂತೆ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.

 three-years-World-Bank-cooperation-Construction-PHPs-Minister Dr.K. Sudhakar

English summary…

New PHCs to be constructed with World Bank aid: Minister Sudhakar
Bengaluru, Nov. 13,2020 (www.justkannada.in): Medical Education Minister Dr. K. Sudhakar today informed that the number of Public Health Centres in the state will be increased within the next three years, with the help of World Bank aid.
Addressing the media at Vidhana Soudha today, he also informed that all the posts in all the Primary Health Care Centres and Community Health Centres and District Hospitals by the end of December this year or by January 2021.three-years-World-Bank-cooperation-Construction-PHPs-Minister Dr.K. Sudhakar
Keywords: Medical Education-PHCs-world bank aid-appointment

key words : three-years-World-Bank-cooperation-Construction-PHPs-Minister Dr.K. Sudhakar