ಉದಯ ಟಿವಿಗೆ ರಜತ ಮಹೋತ್ಸವದ ಸಂಭ್ರಮ

ಬೆಂಗಳೂರು, ಜೂನ್ 01, 2019 (www.justkannada.in): ಉದಯ ಟಿವಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ.

ಹೌದು. ಉದಯ ಟಿವಿ ಕರ್ನಾಟಕದ ಮನರಂಜನಾ ವಾಹಿನಿಗಳಲ್ಲಿ ಒಂದು. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಪ್ರಯತ್ನಿಸುತ್ತಿರುವ ಈ ವಾಹಿನಿ ಇದೀಗ 24ನೇ ವರ್ಷ ಪೂರೈಸಿ 25ನೇ ವರ್ಷಕ್ಕೆ ಕಾಲಿಟ್ಟಿದೆ.

ಜೂನ್ ಒಂದು 1994ರಂದು ಅಧಿಕೃತವಾಗಿ ಉದಯ ಟಿವಿಯಲ್ಲಿ ಲಾಂಚ್ ಆಯಿತು. ಅಪಾರ ಜನಪ್ರಿಯತೆ ಹೊಂದಿರುವ ಉದಯ ಟಿವಿ ಕನ್ನಡಿಗರಿಗಾಗಿ ಸಿನಿಮಾ ಹಾಗೂ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.