ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣ: ಸುಪಾರಿ ನೀಡಿದ್ದ ಆಭರಣದಂಗಡಿ ಮಾಲೀಕನ ಬಂಧನ.

ಮೈಸೂರು,ಆಗಸ್ಟ್,31,2021(www.justkannada.in):  ಮೈಸೂರಿನಲ್ಲಿ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಮತ್ತೊಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಸುಪಾರಿ ನೀಡಿದ್ಧ ಆರೋಪದಡಿ ಮಹದೇವಪುರದ ಬಾಲಾಜಿ ಬ್ಯಾಂಕರ್ಸ್‌ ಮಾಲೀಕ ಮಹೇಂದ್ರ ಎಂಬುವವರನ್ನ ಬಂಧಿಸಲಾಗಿದೆ.  ಇತ್ತೀಚೆಗೆ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಕಳ್ಳತನವಾಗಿತ್ತು. ಈ ವೇಳೆ ದರೋಡೆಕೋರರ ಗುಂಡಿಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದರು.

ಮಹೇಂದ್ರ ವೃತ್ತಿ‌ ವೈಷಮ್ಯದಿಂದ ದರೋಡೆಗೆ ಸುಪಾರಿಗೆ ನೀಡಿದ್ದನು ಎನ್ನಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಹೆಚ್ಚಿ‌ನ ವಿಚಾರಣೆಗಾಗಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

Key words: Robbery- shootout- case – Mysore- Detention – owner – jewelery shop