ಮೈಸೂರು ಗ್ಯಾಂಗ್ ರೇಪ್ ಕೇಸ್ ನಲ್ಲಿ ಮತ್ತೊಬ್ಬ ಆರೋಪಿ ಬಂಧನ: ಗಂಧದ ಮರ ಹುಡುಕಲು ಹೋಗಿ ಕೃತ್ಯವೆಸಗಿದ್ರು.

ಮೈಸೂರು,ಆಗಸ್ಟ್,31,2021(www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ  ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ.

ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳ ಬಂಧನವಾಗಿದೆ.

ಗಂಧದ ಮರ ಹುಡುಕಿ ಹೋದವರಿಂದ ದರೋಡೆ, ರೇಪ್.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಆರೋಪಿಗಳನ್ನ  ಘಟನಾ ಸ್ಥಳಕ್ಕೆ ಕರೆತಂದು ಸ್ಥಳ‌ ಮಹಜರು ಮಾಡಿದ್ದರು. ಈ ಮಧ್ಯೆ ಗೂಡ್ಸ್ ಆಟೋದಲ್ಲಿ ಆರೋಪಿಗಳು ಗಂಧದ ಮರ ಹುಡುಕಿಕೊಂಡು ಹೋಗಿದ್ದರು. ಗಂಧದ ಮರ ಸಿಗದ ಕಾರಣ ಅಲ್ಲೇ ಕುಳಿತು ಆರೋಪಿಗಳು ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಅಲ್ಲಿಗೆ ಯುವಕ ಯುವತಿ ಬಂದಿದ್ದಾರೆ.

ಈ ಸಮಯದಲ್ಲಿ ಕುಡಿತದ ಅಮಲಿನಲ್ಲಿದ್ದ ಆರೋಪಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಮಹಜರು ವೇಳೆ ಈ ಬಗ್ಗೆ ಆರೋಪಿಗಳು ಮಾಹಿತಿ ನೀಡಿದ್ದಾರೆ.

Key words: Mysore- Gang Rape –Case-arrest – another -accused