ಸಿಜೆಐ ಆಗಿ ಡಿವೈ ಚಂದ್ರಚೂಡ್ ನೇಮಕ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ಧ ವ್ಯಕ್ತಿಗೆ  1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್.

ನವದೆಹಲಿ,ನವೆಂಬರ್,11,2022(www.justkannada.in):  ಸುಪ್ರೀಂಕೋರ್ಟ್ ನ ಸಿಜೆಐ ಆಗಿ ಡಿವೈ ಚಂದ್ರ ಚೂಡ್ ನೇಮಕ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ಧ ವ್ಯಕ್ತಿಗೆ  ದೆಹಲಿ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.

ಸಿಜೆಐ ಆಗಿ ಡಿವೈ ಚಂದ್ರಚೂಡ್ ನೇಮಕ ಪ್ರಶ್ನಿಸಿ ಸಂಜೀವ್ ಕುಮಾರ್  ತಿವಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ತಿರಸ್ಕರಿಸಿದ ಕೋರ್ಟ್ ಅರ್ಜಿದಾರ ಸಂಜೀವ್ ಕುಮಾರ್  ತಿವಾರಿಗೆ 1 ಲಕ್ಷ ದಂಡ ವಿಧಿಸಿದೆ.

ಪಬ್ಲಿಸಿಟಿ ಪಡೆಯಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.  ಅರ್ಜಿಯಲ್ಲಿ ಯಾವುದೇ ಸೂಕ್ತ ವಿಚಾರ ಇಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

Key words: questioning-appointment –CJI- DY Chandrachud – PIL-Fine-1 lakh