ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಟರ್ಮಿನಲ್-2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ.

ಬೆಂಗಳೂರು,ನವೆಂಬರ್,11,2022(www.justkannada.in):  ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 ಲೋಕಾರ್ಪಣೆ ಮಾಡಿದರು.

13 ಸಾವಿರ ಕೋಟಿ ರೂ. ವೆಚ್ಚದಲ್ಲಿ  2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಟರ್ಮಿನಲ್-2 ನಿರ್ಮಾಣ ಮಾಡಲಾಗಿದೆ.  ವಾರ್ಷಿಕ . 2.5 ಕೋಟಿ ಸಾಮರ್ಥ್ಯದ ಟರ್ಮಿನಲ್-2 ಇದಾಗಿದ್ದು, ಏಷ್ಯಾದಲ್ಲೇ ಮೊದಲ ಗಾರ್ಡನ್ ಟರ್ಮಿನಲ್  ಆಗಿದೆ.

ಇಂದು ಪ್ರಧಾನಿ ಮೋದಿ ಇದನ್ನ ಲೋಕಾರ್ಪಣೆ ಮಾಡಿದ್ದು ಈ ವೇಳೆ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿಎಸ್ ವೈ ಉಪಸ್ಥಿತರಿದ್ದರು.

Key words: Prime Minister- Modi –inaugurated- Terminal-2 – Kempegowda Airport.