ವಿವಿಯಲ್ಲಿ ಸಕಾರಾತ್ಮಕವಾದ ಸ್ಪರ್ಧೆ, ಪ್ರೋತ್ಸಾಹ ಮನೋಭಾವ ಅಗತ್ಯ : ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

ಮೈಸೂರು,ನವೆಂಬರ್,18,2020(www.justkannada.in) : ವಿವಿಯ ಎಲ್ಲಾ ವಿಭಾಗಗಳಲ್ಲಿ ಸಕಾರಾತ್ಮಕವಾದ ಸ್ಪರ್ಧೆ ಹಾಗೂ ಪ್ರೋತ್ಸಾಹ ಮನೋಭಾವ ಅಗತ್ಯವಾಗಿದ್ದು, ಖಾಸಗೀಕರಣದ ನಡುವೆ ನಮ್ಮನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

 

Positive-competition-Vivi-need-encouraging-attitude-Retired-Chancellor-Prof.K.S.Rangappa

ಮೈಸೂರು ವಿವಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ‘’ವಿಶ್ವದ ಅಗ್ರ 2% ವಿಜ್ಞಾನಿಗಳಾಗಿ ಗುರುತಿಸಲಾದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ರಸಾಯನಶಾಸ್ತ್ರ ಅಧ್ಯಯನ ವಿಭಾಗ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಬಸವಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ರಾಜ್ಯದವರೇ ನಮ್ಮನ್ನು ಗುರುತಿಸಲಿಲ್ಲ ಅಂಥಹದರಲ್ಲಿ ಪ್ರಪಂಚದ ಟಾಪ್ 2% ವಿಜ್ಞಾನಿಗಳಾಗಿ ನಮ್ಮನ್ನು ಗುರುತಿಸಿದ್ದು, ಆಶ್ಚರ್ಯಕರ ಸಂಗತಿ. ಈ ಆಯ್ಕೆಯಲ್ಲಿ ಯಾವುದೇ ರಾಜಕೀಯ ನಡೆಯುವುದಿಲ್ಲ. ವೈಜ್ಞಾನಿಕವಾಗಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ರಾಜ್ಯದಲ್ಲಿ ಆಯ್ಕೆಮಾಡುವಂತೆ ಮೆರಿಟ್ ಬದಲಾಯಿಸಿ ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು.

Positive,competition,Vivi,need,encouraging,attitude,Retired,Chancellor,Prof.K.S.Rangappa

ಅನೆಲಿಟಿಕಲ್ ಕೆಮಿಸ್ಟ್ರಿ(Analytical chemistry)ವಿಭಾಗದಲ್ಲಿ ಪ್ರೊ.ಕೆ.ಬಸವಯ್ಯ ಅವರನ್ನು ಗುರುತಿಸಿರುವುದು ಸಂತೋಷದ ವಿಷಯ. ಅನೇಕರು ಅನೆಲಿಟಿಕಲ್ ಕೆಮಿಸ್ಟ್ರಿ ವಿಭಾಗವನ್ನು ಮುಚ್ಚುವಂತೆ ಸಲಹೆ ನೀಡಿದ್ದರು. ಇದಕ್ಕೆ ನಾನು ವಿರೋಧವ್ಯಕ್ತಪಡಿಸಿದ್ದೇ. ಇಂದು ಪ್ರೊ.ಕೆ.ಬಸವಯ್ಯ ಅವರನ್ನು ಗುರುತಿಸಿರುವುದು ವಿಭಾಗದ ಘನತೆಯನ್ನು ಹೆಚ್ಚಿಸಿದೆ ಎಂದರು.

ಪ್ರಸ್ತುತ ಸಕಾರಾತ್ಮಕವಾದ ಸ್ಪರ್ಧೆ ಕಡಿಮೆಯಾಗಿದೆ. ಈ ಹಿಂದೆ ಸ್ಪರ್ಧಾತ್ಮಕವಾಗಿ ಸಂಶೋಧನೆ ಮಾಡುತ್ತಿದ್ದೆವು. ಆದರೆ, ಯಾವುದೇ ರೀತಿ ಅಸೂಯೆ ಪಡುತ್ತಿರಲಿಲ್ಲ. ರಸಾಯನಶಾಸ್ತ್ರ ಅಧ್ಯಯನ ವಿಭಾಗ ಒಂದು ಭಾಗವಾದರೆ, ವಿವಿಯ ಇತರೆ ವಿಭಾಗಗಳು ಒಂದು ವಿಭಾಗದಂತಾಗಿದೆ. ರಸಾಯನಶಾಸ್ತ್ರ ವಿಭಾಗದಲ್ಲಿ ಟಾಪ್ 2% ವಿಜ್ಞಾನಿಗಳಾಗಿ ಇಬ್ಬರನ್ನು ಗುರುತಿಸಲಾಗಿದೆ. ಬೇರೆ ವಿಭಾಗದಿಂದ ಯಾಕೆ ಆಯ್ಕೆಯಾಗಿಲ್ಲ ಎಂದು ಪ್ರಶ್ನಿಸಿದರು.

ರಸಾಯನಶಾಸ್ತ್ರ ವಿಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಎಲ್ಲಾ ಸಮುದಾಯದಲ್ಲಿ ಬುದ್ಧಿವಂತರು ಇದ್ದಾರೆ. ಎಲೆಮರೆಕಾಯಿಗಳಂತಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿವಿಯಲ್ಲಿ ಸುಮಾರು 15 ವರ್ಷಗಳಿಂದ ನೇಮಕವಾಗಿಲ್ಲ. ವಿಭಾಗವನ್ನು ಮೂರು ಜನರಿಂದ ನಡೆಸಲು ಸಾಧ್ಯವೇ?, ಯಾವುದೇ ವಿಭಾಗ ಹಾಳಾಗಬಾರದು. ಹೀಗಾಗಿ, ಅಭಿವೃದ್ಧಿಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.

ಇನ್ನು ಹತ್ತು ವರ್ಷದವರೆಗೆ ಯಾವ ವಿಭಾಗ ಇರುವುದೋ, ಇಲ್ಲವೋ ಗೊತ್ತಿಲ್ಲ. ವಿಭಾಗಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಸರಕಾರದಿಂದ ಏನು ಪ್ರಯೋಜನವಿಲ್ಲ. ಸರಕಾರವೇ ಖಾಸಗೀಕರಣಕ್ಕೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ನಮ್ಮನ್ನು ನಾವು ಉಳಿಸಿಕೊಳ್ಳುವುದು ಅಗತ್ಯ. ಈಗಲೇ ಸಂಬಳ ಸಿಗುತ್ತಿಲ್ಲ. ಇನ್ನು ಹತ್ತು ವರ್ಷದ ಬಳಿಕ ಏನಾಗುವುದೊ ಎಂದು ಎಚ್ಚರಿಕೆ ನೀಡಿದರು.

ಹಿರಿಯರು ಪ್ರತಿಭಾವಂತ ಹೊಸ ತಲೆಮಾರನ್ನು ವಿವಿಗೆ ಉಳಿಸಿಹೋಗಬೇಕಿದೆ. ಒಳ್ಳೆಯ ಸಾಹಿತಿಗಳನ್ನು ಮರೆಯುತ್ತಿದ್ದೇವೆ. ಸುಳ್ಳು ಸಾಹಿತಿಗಳು ಉಳಿಯುತ್ತಿದ್ದು, ಇವರಿಂದ ಸಾಹಿತ್ಯ ಉಳಿಯುವುದಿಲ್ಲ. ಸರಕಾರವು ಎಲ್ಲವನ್ನೂ ಖಾಸಗೀಕರಣ ಮಾಡಿ ಮುಚ್ಚುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು.

Positive-competition-Vivi-need-encouraging-attitude-Retired-Chancellor-Prof.K.S.Rangappa

ನಾನು ಏನು ಆಗಬೇಕು ಅದು ಆಗಿದ್ದೇನೆ. ನಾನು ಅಂಥಹ ಕೆಟ್ಟ ಕೆಲಸ ಏನು ಮಾಡಿಲ್ಲ. ಸಾಧ್ಯವಾದರೆ ನಿಮ್ಮ ಕೈಲಾದರೆ ನೀವು ಮಾಡಿ, ಇಲ್ಲವಾದರೆ ಮಾಡುವವರಿಗೆ ಪ್ರೋತ್ಸಾಹ ನೀಡಿ. ಎಲ್ಲಾ ವಿಭಾಗಗಳು ನಂಬರ್ 1 ಆಗಲಿ ಎಂದು ತಿಳಿಸಿದರು.

English summary….

Positive attitude of competition, encouragement essential in University: former VC Prof. K.S. Rangappa
Mysuru, Nov. 18, 2020 (www.justkannada.in): “An environment with positive and healthy competition and encouragement is required in all the Departments of the University, we should survive on our own in this era of privatisation,” opined Prof. K.S. Rangappa, former Vice Chancellor, Mysore University.
The Department of Research in Chemistry, Mysore University had organised a programme to felicitated Prof. K.S. Rangappa, former Vice Chancellor, Mysore University and Prof. K. Basavaiah, Retd. Professor, of Department of Research in Chemistry, who were recently identified as the world’s best 2% scientists. Positive-competition-Vivi-need-encouraging-attitude-Retired-Chancellor-Prof.K.S.Rangappa
In his address Prof. K.S. Rangappa expressed his view that positive competition has disappeared in recent years. “We had a healthy competition in undertaking research works, which has disappeared today. We never used to jealous on others. The Department of Research in Chemistry has become a separate division from others. Two of us have been recognised as the top 2% scientists in the world, why not in other departments?” he questioned.
He expressed his happiness for recognizing the services and achievements of Prof. K. Basavaiah of Department of Analytical Chemistry and mentioned that indeed it had increased the pride of the department. He advised to further develop the Department of Chemistry and wished all the Departments of the university would become the best.

key words :Positive-competition-Vivi-need-encouraging-attitude-Retired-Chancellor-Prof.K.S.Rangappa