“ಟೂಲ್ ಕಿಟ್ ಪ್ರಕರಣ : ಪರಿಸರ ಹೋರಾಟಗಾರ್ತಿ ದಿಶಾರವಿಗೆ ಜಾಮೀನು”

ಬೆಂಗಳೂರು,ಫೆಬ್ರವರಿ,23,2021(www.justkannada.in) : ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ಪರಿಸರ ಹೋರಾಟಗಾರ್ತಿ ದಿಶಾರವಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಜಾಮೀನು ನೀಡಿ ಆದೇಶ ನೀಡಿದೆ.jkಬೆಂಗಳೂರಿನಲ್ಲಿ ಫೆಬ್ರವರಿ 13ರಂದು ಖಲಿಸ್ತಾನವನ್ನು ಬೆಂಬಲಿಸುವುದರೊಂದಿಗೆ ಟೂಲ್ ಕಿಟ್ ಸಿದ್ಧಪಡಿಸಿದ್ದಾರೆ ಮತ್ತು ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡುವ ಜಾಗತಿಕ ಪಿತೂರಿಯ ಭಾಗವಾಗಿ ರೈತರ ಪ್ರತಿಭಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಫೆಬ್ರವರಿ 20ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. 1 ಲಕ್ಷ ರೂ. ಗಳ ಎರಡು ಬಾಂಡ್ ನೊಂದಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಟೂಲ್ ಕಿಟ್ ಆರೋಪದಲ್ಲಿ ಬಂಧಿಸಲಾಗಿರುವ ದಿಶಾ ರವಿಗೆ ಜಾಮೀನು ನೀಡುವುದನ್ನು ತಡೆಯುತ್ತಿರುವ ಕಾನೂನು ಯಾವುದು? ದಿಶಾ ರವಿ ವಿರುದ್ಧದ ಆರೋಪಗಳು ಯಾವುವು? ಆಕೆಯ ವಿರುದ್ಧದ ಸಾಕ್ಷ್ಯಗಳು ಯಾವುವು? ಎಂಬ ಮೂರು ಪ್ರಶ್ನೆಗಳನ್ನು ನ್ಯಾಯಾಲಯ ಪೊಲೀಸರಿಗೆ ಕೇಳಿತ್ತು.

ಪಟಿಯಾಲ ಹೌಸ್ ಕೋರ್ಟ್ ಕಾಂಪ್ಲೆಕ್ಸ್ ನ ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಧರ್ಮೆಂದರ್ ರಾಣಾರವರು ಫೆ.20ರಂದು ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಮುಂದೂಡಿದ್ದರು.

key words : Tool Kit Case-Environment-fighter-direction-Bail