Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ನಾನು ಇನ್ಮುಂದೆ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪಿಸಲ್ಲ- ಸಚಿವ ಶ್ರೀರಾಮುಲು ಹೇಳಿಕೆ…

ನಾನು ಇನ್ಮುಂದೆ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪಿಸಲ್ಲ- ಸಚಿವ ಶ್ರೀರಾಮುಲು ಹೇಳಿಕೆ…

ಮಂಡ್ಯ,ಫೆ,4,2020(www.justkannda.in): ನನಗೆ ಪಕ್ಷವೇ ಮುಖ್ಯ. ಡಿಸಿಎಂಗಾಗಿ ಪಕ್ಷಕ್ಕೆ ಮುಜುಗರ ತರಲ್ಲ. ನಾನು ಇನ್ಮುಂದೆ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪಿಸಲ್ಲ ಎಂದು ಆರೋಗ್ಯ ಸಚಿವ  ಶ್ರೀರಾಮುಲು ತಿಳಿಸಿದರು.

ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ನಾನು ಇನ್ಮುಂದೆ ಡಿಸಿಎಂ ಹುದ್ದೆ ಪ್ರಸ್ತಾಪಿಸಲ್ಲ. ನಾನು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ. ಈ ಬಗ್ಗೆ ಸಿಎಂ ಬಿಎಸ್ ವೈ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತೆ. ಇಂತಹ ಆಸೆ ತಪ್ಪಲ್ಲ ಎಲ್ಲವನ್ನ ಸಿಎಂ ಬಿಎಸ್ ವೈ ನಿರ್ಧಾರ ಮಾಡುತ್ತಾರೆ. ಸಿಎಂ ಎಲ್ಲರಿಗೂ ಅವಕಾಶ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: I am –not- referring – post – DCM-Minister -Sriramulu