ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ: ಸ್ಪಷ್ಟನೆ ನೀಡಿದ ಸಂಸದ ಅನಂತ್ ಕುಮಾರ್ ಹೆಗ್ಡೆ…

ನವದೆಹಲಿ,ಫೆ,4,2020(www.justkannada.in):  ಸ್ವಾತಂತ್ರ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೆ ಸಂಸದ ಅನಂತ್ ಕುಮಾರ್ ಹೆಗ್ಡೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ನಾನು ಆ ರೀತಿಯಾಗಿ ಹೇಳಿಕೆಯನ್ನೇ ಕೊಟ್ಟಿಲ್ಲ. ನಾನು ಸ್ವಾತಂತ್ರ ಹೋರಾಟ ಹೇಗಿತ್ತು ಎಂಬುದನ್ನ ಹೇಳಿದ್ದೇನೆ ಅಷ್ಟೆ. ಭಾಷಣದ ವೇಳೆ ನಾನು ಮಹಾತ್ಮಾಗಾಂಧಿಜಿ ಅವರ ಹೆಸರನ್ನ ಉಲ್ಲೇಖಿಸಿಲ್ಲ. ಯಾವುದೇ ಸ್ವಾತಂತ್ರ ಹೋರಾಟಗಾರರನ್ನ ಟೀಕಿಸಿಲ್ಲ. ಮಹಾತ್ಮಾಗಾಂಧಿಗೆ ಅಪಮಾನ ಮಾಡುವ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ  ಏನು ಹೇಳದೆ ಇರೋದನ್ನ ಚರ್ಚೆ ಮಾಡ್ತಿದ್ದಾರೆ ಅಂದ್ರೆ ಅದರ ಬಗ್ಗೆ ಮಾತನಾಡಲ್ಲ. ನನ್ನ ಭಾಷಣವನ್ನ ಒಮ್ಮೆ ಕೇಳಲಿ ಎಂದು ಅನಂತ್ ಕುಮಾರ್ ಹೆಗ್ಡೆ ತಿಳಿಸಿದರು.  ವಿವಾದಾತ್ಮಕ ಹೇಳಿಕೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಅವರನ್ನ ಭೇಟಿಯಾಗಿ ಚರ್ಚಿಸಿದ್ದರು.

Key words: Controversial statement – freedom fighters-Clarified –MP- Ananth Kumar Hegde.