ಬ್ಯಾಂಕ್  ಗೆ ನುಗ್ಗಿ ರೌಡಿಶೀಟರ್ ಬರ್ಬರ ಹತ್ಯೆ.

ಬೆಂಗಳೂರು,ಜುಲೈ,19,2021(www.justkannada.in):  ಬ್ಯಾಂಕ್ ಗೆ ಪತ್ನಿಯ ಜೊತೆ ಬಂದಿದ್ದ ರೌಡಿ ಶೀಟರ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.jk

ಕೋರಮಂಗಲ 8ನೇ ಬ್ಲಾಕ್ ನಲ್ಲಿರುವ ಯುನಿಯನ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬಬ್ಲಿ ಹತ್ಯೆಯಾದ ರೌಡಿಶೀಟರ್. ವ್ಯವಹಾರ ನಿಮಿತ್ತ ಬಬ್ಲಿ ತನ್ನ ಪತ್ನಿಯೊಂದಿಗೆ ಬ್ಯಾಂಕ್ ಗೆ ಆಗಮಿಸಿದ್ದನು. ಈ ವೇಳೆ ಬ್ಯಾಂಕ್ ಒಳಗೆ  ನುಗ್ಗಿದ ದುಷ್ಕರ್ಮಿಗಳು ರೌಡಿಶೀಟರ್ ಬಬ್ಲಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ವಿಷಯ ತಿಳಿದ ಆಗ್ನೇಯ ವಿಭಾಗದ ಡಿಸಿಪಿ ಜೋಶಿ ಶ್ರೀಧರ್ ಮಹದೇವ್ ಹಾಗೂ ಕೋರಮಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ತಮ್ಮ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Murder – Rowdisheater- bank- bangalore