Thursday, August 13, 2026

BDA Apartments

Home Cinema ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆ, ಅಶ್ಲೀಲ ಸಂದೇಶ- ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ.

ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ ಕರೆ, ಅಶ್ಲೀಲ ಸಂದೇಶ- ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ.

ಬೆಂಗಳೂರು.ಜುಲೈ.19.( www.justkannad.in): ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ವಾದ, ಆರೋಪ ಪ್ರತ್ಯಾರೋಪಗಳು ಮುಂದುವರೆದಿದ್ದು, ಈ ನಡುವೆ ನಟ ದರ್ಶನ್  ಹಿಂಬಾಲಕರಿಂದ ನನಗೆ ಬೆದರಿಕೆ ಕರೆ,ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್  ಆರೋಪ ಮಾಡಿದ್ದಾರೆ.jk

ಬೆಂಗಳೂರಿನಲ್ಲಿ ಸುದ್ಧಿಗಾರಗೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ,  ಕಳೆದ 24 ಗಂಟೆಯಿಂದಲೂ ನಿರಂತರವಾಗಿ ದೂರವಾಣಿ ಹಾಗೂ ವಾಟ್ಸ್ ಆಫ್ ಮೂಲಕ ನನಗೆ  ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಆಶ್ಲೀಲ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದು,  ಆದ್ದರಿಂದ ನಾನು ಸೈಬರ್ ಪೊಲೀಸ್ ಮುಖಾಂತರ ಎಫ್.ಐ.ಆರ್ ದಾಖಲಿಸಲು ಮುಂದಾಗಿದ್ದೇನೆ ಎಂದು ನಟ ದರ್ಶನ್ ಅಭಿಮಾನಿಗಳ ವಿರುದ್ಧ ಇಂದ್ರಜಿತ್ ಲಂಕೇಶ್  ಅಸಮಾಧಾನ ಹೊರಹಾಕಿದ್ದಾರೆ.

ಬೆದರಿಕೆ ಕರೆಗಳಿಗೆ ನಾನು ಭಯಬೀಳುವುದಿಲ್ಲ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್  ಅವರು ತಿಳಿಸಿದ್ದಾರೆ. ಇತ್ತೀಚೆಗಷ್ಟೆ ನಟ ದರ್ಶನ್ ವಿರುದ್ಧ ಸಪ್ಲೇಯರ್ ಮೇಲೆ ಹಲ್ಲೆ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ಧಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು.  ಈ ವಿಚಾರಕ್ಕೆ ಸಂಬಂಧಿಸಿಂತೆ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವೆ ವಾದ ವಾಗ್ವಾದಗಳು ನಡೆದು ಬಾರಿ ಸುದ್ದಿಯಾಗಿತ್ತು.

Key words: threat- call –actor-Darshan- followers- Director- Indrajit Lankesh