ಮಂಡ್ಯ ಜಿಲ್ಲಾಡಳಿತದ ಯಡವಟ್ಟು: ಸರ್ಕಾರ ರದ್ದು ಮಾಡಿದರೂ, ಮಂಡ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ.

ಮಂಡ್ಯ,ಜನವರಿ,21,2022(www.justkannada.in):  ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಇಂದು ಸಿಎಂ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿದೆ.

ಈ ಮಧ್ಯೆ ಮಂಡ್ಯ ಜಿಲ್ಲಾಡಳಿತದ ಯಡವಟ್ಟು ಮಾಡಿದ್ದು ಸರ್ಕಾರಕ್ಕೂ ಮೊದಲೇ ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡಿದೆ. ಜ.31ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡಿ ಮಂಡ್ಯ ಡಿಸಿ ಆದೇಶಿಸಿದ್ದರು. ಹೀಗಾಗಿ ಮಂಡ್ಯದಲ್ಲಿ ಕರ್ಫ್ಯೂ ಮುಂದುವರಿಯುತ್ತಾ? ರದ್ದಾಗುತ್ತಾ? ಗೊಂದಲದಲ್ಲಿ ಮಂಡ್ಯ ಜನರು, ವ್ಯಾಪಾರಸ್ಥರು ಇದ್ದಾರೆ.today-weekend-curfew-tomorrow-entire-state-quiet-bangalore

ಆದರೆ ಮಂಡ್ಯ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸರ್ಕಾರ ರದ್ದು ಮಾಡಿದರೂ, ಮಂಡ್ಯದಲ್ಲಿ ಕರ್ಫ್ಯೂ ಮುಂದುವರೆದಿದೆ.  ಇಡೀ ರಾಜ್ಯಕ್ಕೆ ಒಂದು ಕಾನೂನು, ಮಂಡ್ಯಕ್ಕೆ ಮತ್ತೊಂದು ಕಾನೂನು..? ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತದ ಯಡವಟ್ಟಿಗೆ ಮಂಡ್ಯ ಜನ ಗೊಂದಲಕ್ಕೀಡಾಗಿದ್ದಾರೆ.

Key words: Mandya District-weekend-curfew